ಹಾಸನ: ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ದೇವದಾಸು ಹೆಚ್.ಆರ್. (ಆನಂದದಾಸ್ ಡಯಾಗ್ನೋಸ್ಟಿಕ್ ಲ್ಯಾಬ್) ಹಾಗೂ ಡಾ. ಕೆ.ವಿ. ಸುಜಾತಾ (ದಾಸ್ ಸ್ಕ್ಯಾನಿಂಗ್ ಸೆಂಟರ್) ಅವರ ಪುತ್ರಿ ಡಾ. ತೃಪ್ತಿ ದಾಸ್ ಅವರು ಯುರೋಪಿಯನ್ ಡಿಪ್ಲೊಮಾ ಇನ್ ರೇಡಿಯಾಲಜಿ (EDiR) ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಮೊದಲ ಮಹಿಳಾ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಾ. ತೃಪ್ತಿ ಅವರು ಇದೀಗ ಯುರೋಪಿಯನ್ ಬೋರ್ಡ್ ಪ್ರಮಾಣಿತ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ. ಇದೇ ವೇಳೆ, ಅವರು ಡಯಾಗ್ನೊಸ್ಟಿಕ್ ರೇಡಿಯಾಲಜಿ (EDiR) ಮತ್ತು ಇಂಟರ್ವೆನ್ಶನಲ್ ರೇಡಿಯಾಲಜಿ (EBIR) ಎಂಬ ಎರಡೂ ಕ್ಷೇತ್ರಗಳಲ್ಲಿ ಕೇವಲ ಒಂದು ತಿಂಗಳಲ್ಲಿ ಯುರೋಪಿಯನ್ ಮಟ್ಟದ ಎರಡು ಪ್ರಮಾಣಪತ್ರಗಳನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.
MBBS, MD, DNB, FVIR, EBIR, EDiR ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪದವಿಗಳನ್ನು ಗಳಿಸಿರುವ ಅವರು ಪ್ರತಿಭಾವಂತ ರೇಡಿಯಾಲಜಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಈ ರೀತಿ ಸಾಧನೆ ಮಾಡಿದಂತಹ ಬೆರಳೆಣಿಕೆ ಮಂದಿಯಲ್ಲಿ ಇವರು ಕೂಡ ಒಬ್ಬರು ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ಡಾ. ತೃಪ್ತಿ ದಾಸ್ ಅವರು ನಾಲ್ಕೂ ವರ್ಷಗಳಲ್ಲಿ ಡಿಸ್ಟಿಂಕ್ಷನ್ ಸಾಧಿಸುವುದರ ಜೊತೆಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಗ್ರ ಶ್ರೇಣಿಯ ರ್ಯಾಂಕ್ ಪಡೆದು ಗಮನ ಸೆಳೆದಿದ್ದರು.
ನಂತರ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯಾಲಜಿಯಲ್ಲಿ ಎಂಡಿ ಪದವಿ ಪಡೆದ ಅವರು, ಕಾಲೇಜಿಗೆ ಚಿನ್ನದ ಪದಕವನ್ನು ಗಳಿಸಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ (RGUHS) ೪ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಇದಲ್ಲದೆ ರೇಡಿಯಾಲಜಿಯಲ್ಲಿ ಡಿಪ್ಲೊಮೇಟ್ ಆಫ್ ನ್ಯಾಷನಲ್ ಬೋರ್ಡ್ (DNB) ಪದವಿಯನ್ನೂ ಅವರು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಹಲವು ಯುವ ವೈದ್ಯರಿಗೆ ಪ್ರೇರಣೆಯಾಗಿದ್ದಾರೆ.
ಇಂಟರ್ವೆನ್ಷನಲ್ ರೇಡಿಯಾಲಜಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಡಾ. ತೃಪ್ತಿ ದಾಸ್ ಅವರು 2023 ರಿಂದ 2025ರವರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ FVIR (ಫೆಲೋಶಿಪ್ ಇನ್ ವಾಸ್ಕುಲರ್ ಅಂಡ್ ಇಂಟರ್ವೆನ್ಷನಲ್ ರೇಡಿಯಾಲಜಿ) ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಇದೇ ವೇಳೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಯುರೋಪಿನ ಎರಡು ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣವೆಂದು ಪರಿಗಣಿಸಲ್ಪಡುವ ಪದವಿಗಳಾದ ಯುರೋಪಿಯನ್ ಡಿಪ್ಲೊಮಾ ಇನ್ ರೇಡಿಯಾಲಜಿ (EDiR) ಹಾಗೂ ಯುರೋಪಿಯನ್ ಬೋರ್ಡ್ ಆಫ್ ಇಂಟರ್ವೆನ್ಷನಲ್ ರೇಡಿಯಾಲಜಿ (EBIR) ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ ಪ್ರಮಾಣಪತ್ರಗಳನ್ನು ಪಡೆದಿರುವ ಭಾರತದ ಕೆಲವೇ ಕೆಲವು ಮಹಿಳಾ ರೇಡಿಯಾಲಜಿಸ್ಟ್‌ಗಳಲ್ಲಿ ಡಾ. ತೃಪ್ತಿ ದಾಸ್ ಒಬ್ಬರಾಗಿದ್ದಾರೆ.
ಪ್ರಸ್ತುತ ಡಾ. ತೃಪ್ತಿ ದಾಸ್ ಅವರು ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿನ ಇಂಟರ್ವೆನ್ಷನಲ್ ರೇಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜೊತೆಗೆ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂದರ್ಶಕ ಕನ್ಸಲ್ಟೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ರೇಡಿಯಾಲಜಿಯಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ, ಶೈಕ್ಷಣಿಕ ಸಂಶೋಧನೆ ಹಾಗೂ ರೋಗಿಗಳಿಗೆ ಸುಧಾರಿತ ಮತ್ತು ಕಡಿಮೆ ಅಪಾಯದ ಚಿಕಿತ್ಸೆ ನೀಡುವಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಇಮೇಜ್–ಗೈಡೆಡ್ ಇಂಟರ್ವೆನ್ಷನ್ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಅಳವಡಿಸುವ ನಿಟ್ಟಿನಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಹೆಮ್ಮೆಯ ಪುತ್ರಿಯಾಗಿರುವ ಡಾ. ತೃಪ್ತಿ ದಾಸ್ ಅವರ ಈ ಸಾಧನೆಗಳು ಯುವ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಇವರ ಈ ಸಾಧನೆಗೆ ಪೋಷಕರು ಸಂಬಂಧಿಕರು ಸ್ನೇಹಿತರು ಸೇರಿದಂತೆ ಜಿಲ್ಲೆಯ ಹಲವು ವೈದ್ಯರು ಕೂಡ ಅಭಿನಂದಿಸಿ ಶುಭ ಹಾರೈಸಿದ್ದಾರೆ.
Meanwhile, it is a special achievement that he has obtained two European level certificates in just one month, in both the fields of Diagnostic Radiology (EDiR) and Interventional Radiology (EBIR).










