ಹೊಳೆನರಸೀಪುರ: ಪಟ್ಟಣದ ಕೊರಮ ಸಮುದಾಯ ಭವನಕ್ಕೆ ತಮ್ಮ ಸ್ವಂತ ಹಣದಿಂದ ಪುರಸಭೆ ಮಾಜಿ ಅಧ್ಯಕ್ಷರಾದ ಸಿ.ಜಿ.ವೀಣಾ ರಾಜೇಶ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹೆಚ್.ಎನ್. ರಾಜೇಶ್ ದಂಪತಿ
2 ಲಕ್ಷ ರೂ. ಬೆಲೆಬಾಳುವ ಕುರ್ಚಿ ಮತ್ತು ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರಮ ಸಮುದಾಯ ಭವನಕ್ಕೆ ಕುರ್ಚಿ ಮತ್ತು ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಿದ ಡಾ.ರಾಜೇಶ್ ಮತ್ತು ವೀಣಾ ರಾಜೇಶ್ ದಂಪತಿ ಗಳನ್ನು ಇದೇ ವೇಳೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೊರಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Dr. Rajesh and Veena Rajesh, a couple who donated chairs and tables to the Korama Community Hall, were honored by the community on this occasion.










