ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಿರಂತರ ಯೋಗ ಕೇಂದ್ರ ವತಿಯಿಂದ ಯೋಗ, ಧ್ಯಾನ ಮತ್ತು ದೇಶಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನ ನಾಗಮಂಗಲ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 14-12-2025 ರಿಂದ 04-12-2025 ರವರೆಗೂ ಖ್ಯಾತ ಯೋಗ ಗುರುಗಳಾದ ಲಕ್ಷಣ್ ಜಿ.ರವರ ಮಾರ್ಗದರ್ಶನದಲ್ಲಿ ಗ್ರಾಮದ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಪ್ರತಿದಿನ ಬೆಳಿಗ್ಗೆ 05:15 ರಿಂದ 06:45 ವರೆಗೆ ನಡೆಯಲಿದೆ ಎಂದು ನಿರಂತರ ಯೋಗ ಕೇಂದ್ರ ಬಾಳ್ಳುಪೇಟೆ ಹಾಗೂ ಕುನಿಗನಹಳ್ಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಯೋಗ ಶಿಬಿರದಲ್ಲಿ ಮಂಡಿ ನೋವು, ಸೊಂಟ ನೋವು, ಬೆನ್ನು ನೋವು ಗ್ಯಾಸ್ಟಿಕ್ ಬಿ ಪಿ ಶುಗರ್, ಬೊಜ್ಜು ಮೈಗ್ರೇನ್ ಮುಟ್ಟಿನ ತೊಂದರೆ ಅಲರ್ಜಿ ಉಸಿರಾಟದ ತೊಂದರೆ ಜೀರ್ಣಕ್ರಿಯೆ ಇನ್ನು ಮುಂತಾದ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
yoga, meditation and indigenous medicine camp has been organized by the Continuous Yoga Center in Ballupet










