11 C
Munich
Home News ಸಕಲೇಶಪುರ: ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆ

ಸಕಲೇಶಪುರ: ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆ

BJP-backed Lokesh has been elected as the president of Changadihalli Gram Panchayat.

ಸಕಲೇಶಪುರ : ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಅಧ್ಯಕ್ಷರಾದ ಕಾಂಗ್ರೆಸ್ ಬೆಂಬಲಿತ ಜಗದೀಶ್ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಲೋಕೇಶ್ 5 ಮತಗಳನ್ನು ಪಡೆದರೆ ಅವರ ಎದುರಾಳಿ ಪಾರ್ವತಿ 4 ಮತಗಳನ್ನು ಪಡೆದು ಪರಾಜಿತಾರಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತಾಲೂಕು ಪಂಚಾಯತ್ ಇ. ಓ ಗಂಗಾಧರ್ ಕಾರ್ಯ ನಿರ್ವಹಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಮಾತನಾಡಿ ಚಂಗಡಿಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಈ ಹಿಂದೆ ಕೆಲವು ಕಾರಣಗಳಿಂದ ತಪ್ಪಿದ ಅಧಿಕಾರ ಪುನ: ಬಿಜೆಪಿ ಗೆ ದೊರಕಿದೆ.

ಇದು ಶಾಸಕ ಸಿಮೆಂಟ್ ಮಂಜುರವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡುವುದರಲ್ಲಿ ಅನುಮಾನ ವಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನೇತ್ರಾ, ಮಧು, ಸುಧಾ, ಕುಮಾರ ಸ್ವಾಮಿ ಪಕ್ಷದ ಮುಖಂಡರುಗಳಾದ ಸವಿನ್ ಗೌಡ, ಧರಣೇಶ್,ನವೀನ್ ಬಸಗುಳ, ಕಿರಣ್ ನಾರೂರು, ಸಚ್ಚಿನ್ ಸೇರಿದಂತೆ ಇತರರು ಹಾಜರಿದ್ದರು.

error: Content is protected !!