ಹಾಸನ: ಕೆಲ ತಿಂಗಳುಗಳ ಹಿಂದಷ್ಟೇ ಸಕಲೇಶಪುರ ಉಪವಿಭಾಗಾಧಿಕಾರಿಯಾಗಿ ನೇಮಕವಾಗಿದ್ದ ಕೆ.ಎ.ಎಸ್.ಅಧಿಕಾರಿ ಎಚ್.ಡಿ.ರಾಜೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ರಾಜೇಶ್ ಅವರನ್ನು ಬಳ್ಳಾರಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಸದ್ಯ ಸಕಲೇಶಪುರ ಉಪವಿಭಾಗಕ್ಕೆ ಯಾರನ್ನೂ ನೇಮಕ ಮಾಡಿಲ್ಲ. ಅವರು ದಲಿತ ಸಮುದಾಯದ ಶಿರಸ್ತೇದಾರ್ ಒಬ್ಬರನ್ನು ಕಾರಿನಿಂದ ಇಳಿಸಿ ಕಳಿಸಿದ್ದ ಕಾರಣಕ್ಕೆ ದಲಿತ ಸಂಘಟನೆಗಳ ಕೆಂಗಣ್ಣಗೆ ಗುರಿಯಾಗಿದ್ದನ್ನು ಸ್ಮರಿಸಬಹುದು.
ಹಲವಾರು ತಿಂಗಳುಗಳಿಂದ ಖಾಲಿಯಿದ್ದ ಹಾಸನ ಅಪರ ಜಿಲ್ಲಾಧಿಕಾರಿ ಹುದ್ದೆಗೆ ಹಿಮ್ಸ್ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಬಿ.ಎ.ಜಗದೀಶ್ ಅವರನ್ನು ನೇಮಕ ಮಾಡಲಾಗಿದೆ.









