ಹಾಸನ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಂಭ್ರಮ ರೊಬೋಟಿಕ್ ಬಟರ್ ಫ್ಲೈ ಶೋ 2025 ಡಿ.1 ರಿಂದ ನಗರದ ಬಿ.ಎಂ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಹೋಟೆಲ್ ಹಿಂಭಾಗ ವೈಭವವಾಗಿ ಆರಂಭಿಸಲಾಗುತ್ತಿದೆ ಎಂದು ಸೈಮನ್ ಎಕ್ಸಿಬಿಶನ್ ವ್ಯವಸ್ಥಾಪಕ ಗಣೇಶ್ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಈ ಶೋನಲ್ಲಿ ನೂರಾರು ರೀತಿಯ ಚಿಟ್ಟೆಗಳು ಮತ್ತು ಕೀಟಗಳನ್ನು ರೋಬೊಟಿಕ್ ಮಾದರಿಯಲ್ಲಿ ಆಕರ್ಷಕವಾಗಿ ಪ್ರದರ್ಶಿಸಲಾಗುತ್ತಿದೆ ಎಂದರು. ನಗರ ಪ್ರದೇಶಗಳಲ್ಲಿ ನೈಸರ್ಗಿಕ ಚಿಟ್ಟೆಗಳ ಸಂಖ್ಯೆ ಕಡಿಮೆ ಯಾಗುತ್ತಿರುವ ಕಾಲದಲ್ಲಿ ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಮಿಡತೆ, ಡ್ರ್ಯಾಗನ್ ಫ್ಲೈ, ಹಾರುವ ಇರುವೆಗಳು, ಚೇಳು, ಹರ್ಕ್ಯುಲಸ್ ಜೀರುಂಡೆ, ಕಣಜ, ಒಂಟೆಹುಳು, ಜೇನು ಹುಳು ಸೇರಿದಂತೆ ವಿವಿಧ ಕೀಟಗಳ ವಿವರ ಸಿಗಲಿದೆ ಎಂದರು.
ವೈಜ್ಞಾನಿಕ ಹೆಸರು ಮತ್ತು ಅವುಗಳ ಜೀವನ ಚಕ್ರ ನಿಕಟವಾಗಿ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ.
ಹಾಸನದ ನಾಗರಿಕರು ಈ ಅಪರೂಪದ ರೋಬೊಟಿಕ್ ಬಟ ರ್ಫ್ಲೈ ಶೋದಿಂದ ಸದುಪಯೋಗ ಪಡೆಯುವಂತೆ ಆಯೋಜಕರು ವಿನಂತಿಸಿದರು.
1-7ನೇತರಗತಿ ಮಕ್ಕಳು ಅವರ ಪೋಷಕರೊಂದಿಗೆ ಆಗಮಿಸಿದರೆ ಉಚಿತ ಪ್ರವೇಶ ಇರಲಿದೆ. ಒಳಗೆ ಡ್ರಾಗನ್ ಟ್ರೈನ್, ಮಕ್ಕಳ ಆಟಿಕೆ, ಅಮ್ಯೂಸ್‌ಮೆಂಟ್ ಪಾರ್ಕ್, ಬೋಟಿಂಗ್, ಜಂಪಿಂಗ್ ವ್ಯವಸ್ಥೆ ಇದೆ. ವಿವಿಧ ಕಾಡು ಪ್ರಾಣಿಗಳನ್ನೂ ನೋಡಬಹುದು. ಗೃಹಿಣಿಯರಿಗಾಗಿ ಆಕರ್ಷಕ ವಸ್ತುಗಳ ಮಾರಾಟವೂ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮೇನೇಜರ್ ಗೌರವ್ ಇದ್ದರು.










