12.9 C
Munich
Home News ಚನ್ನರಾಯಪಟ್ಟಣ: ಮಂಜುಳಾ.ಡಿ ಅವರಿಗೆ ‘ಆದರ್ಶ ಶಿಕ್ಷಕ ರತ್ನ’ ರಾಜ್ಯೋತ್ಸವ ಪ್ರಶಸ್ತಿ

ಚನ್ನರಾಯಪಟ್ಟಣ: ಮಂಜುಳಾ.ಡಿ ಅವರಿಗೆ ‘ಆದರ್ಶ ಶಿಕ್ಷಕ ರತ್ನ’ ರಾಜ್ಯೋತ್ಸವ ಪ್ರಶಸ್ತಿ

The awards presented in the field of education were presented at the Suvarna Kannada Rajyotsava and Kavi Kavya Sambhrama 2025 program held on Saturday in collaboration with Kavyashree Charitable Trust (Re) Karnataka and Dinesh Foundation Bangalore in Bengaluru.

ಚನ್ನರಾಯಪಟ್ಟಣ: ಬೆಂಗಳೂರಿನಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ( ರಿ) ಕರ್ನಾಟಕ ಮತ್ತು ದಿನೇಶ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಶನಿವಾರ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಹಾಗೂ ಕವಿ ಕಾವ್ಯ ಸಂಭ್ರಮ 2025 ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿಯ ಕನುವನಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುಳಾ.ಡಿ ಅವರನ್ನು ಆದರ್ಶ ಶಿಕ್ಷಕ ರತ್ನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ರಾಜ್ಯಾಧ್ಯಕ್ಷ ಡಾ.ಜಿ.ಶಿವಣ್ಣ, ದಿವ್ಯ ಸಾನಿಧ್ಯ ವಹಿಸಿದ ಶ್ರೀ ಪೂಜ್ಯ ಗುರು ಚರಂತಯ್ಯ ಸ್ವಾಮಿಗಳು, ದಿನೇಶ್ ಫೌಂಡೇಶನ್ ಅಧ್ಯಕ್ಷ ದಿನೇಶ್ ನಾಯ್ಕ್, ರಂಗಭೂಮಿ ಕಿರುತೆರೆ ನಟಿ ಕು. ಶ್ರೀದೇವಿ, ಶಿಕ್ಷಕಿ ಪಾರ್ವತಿ ಬಿ.ಎ, ಬೆಂಗಳೂರಿನ ವಕೀಲರ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಹಾಗೂ ಮುಂತಾದವರು ಹಾಜರಿದ್ದರು.

error: Content is protected !!