ಮಲಯಾಳಂ ಸಿನಿಮಾ ‘ಇಕೋ’ ಅತ್ಯುತ್ತಮ ವಿಮರ್ಶೆಗಳನ್ನು ಗಳಿಸಿ ಯಶಸ್ಸಿನ ಹಾದಿಯಲ್ಲಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ವಿತರಿಸಿದೆ. ಕನ್ನಡ ನಾಡಿನಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ವಿಶೇಷ. ವಾರಾಂತ್ಯದಲ್ಲಿ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಲೈಟರ್ ಬುದ್ದ ಫಿಲಂಸ್ ಈ ವರ್ಷ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ‘ಸು ಫ್ರಮ್ ಸೋ’ ನಿರ್ಮಿಸಿ ಉದ್ಯಮದಲ್ಲಿ ದಾಖಲೆಯ ಯಶಸ್ಸು ಗಳಿಸಿ, ‘ಲೋಕಾ’ ವಿತರಿಸಿ ದೊಡ್ಡ ಯಶಸ್ಸು ಕಂಡು, ಈಗ ವರ್ಷಾಂತ್ಯದಲ್ಲಿ ‘ಇಕೋ’ ಚಿತ್ರದೊಂದಿಗೆ 2025ರಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟ ಶ್ರೇಯಕ್ಕೆ ಪಾತ್ರವಾಗುತ್ತಿದೆ.










