ಬೆಂಗಳೂರು, ನವೆಂಬರ್ 17: ರಾಜ್ಯ ಸರ್ಕಾರವು 2026ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಸಚಿವಾಲಯದ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಸಾಮಾನ್ಯ ರಜೆಗಳು, ನಿರ್ಬಂಧಿತ ರಜೆಗಳು, ಹಾಗೂ ನಗದುಪತ್ರ ಕಾಯ್ದೆಯಡಿ ಬರುವ ರಜೆಗಳು ಪ್ರಕಟವಾಗಿವೆ.
🗓️ 2026ರಲ್ಲಿ ಒಟ್ಟು 20 ಸಾಮಾನ್ಯ ಸಾರ್ವಜನಿಕ ರಜೆಗಳು
ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ನಾಲ್ಕನೇ ಶನಿವಾರಗಳ ಜೊತೆಗೆ, ಕೆಳಗಿನ 20 ದಿನಗಳನ್ನು ಸಾಮಾನ್ಯ ರಜೆಗಳಾಗಿ ಘೋಷಿಸಲಾಗಿದೆ:
- ಜನವರಿ 15 – ಮಕರ ಸಂಕ್ರಾಂತಿ
- ಜನವರಿ 26 – ಗಣರಾಜ್ಯೋತ್ಸವ
- ಮಾರ್ಚ್ 19 – ಯುಗಾದಿ
- ಮಾರ್ಚ್ 21 – ರಂಝಾನ್
- ಮಾರ್ಚ್ 31 – ಮಹಾವೀರ ಜಯಂತಿ
- ಏಪ್ರಿಲ್ 3 – ಗುಡ್ ಫ್ರೈಡೆ
- ಏಪ್ರಿಲ್ 14 – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
- ಏಪ್ರಿಲ್ 20 – ಬಸವ ಜಯಂತಿ, ಅಕ್ಷಯ ತೃತೀಯ
- ಮೇ 1 – ಮೇ ದಿನ
- ಮೇ 28 – ಬಕ್ರಿದ್
- ಜೂನ್ 26 – ಮೊಹರಂ
- ಆಗಸ್ಟ್ 15 – ಸ್ವಾತಂತ್ರ್ಯ ದಿನ
- ಆಗಸ್ಟ್ 26 – ಈದ್ ಮಿಲಾದ್
- ಸೆಪ್ಟೆಂಬರ್ 14 – ವರಸಿದ್ಧಿ ವಿನಾಯಕ ವ್ರತ
- ಅಕ್ಟೋಬರ್ 2 – ಗಾಂಧಿ ಜಯಂತಿ
- ಅಕ್ಟೋಬರ್ 20 – ಮಹಾನವಮಿ, ಆಯುಧ ಪೂಜೆ
- ಅಕ್ಟೋಬರ್ 21 – ವಿಜಯದಶಮಿ
- ನವೆಂಬರ್ 10 – ದೀಪಾವಳಿ, ಬಲಿಪಾದ್ಯಮಿ
- ನವೆಂಬರ್ 27 – ಕನಕದಾಸ ಜಯಂತಿ
- ಡಿಸೆಂಬರ್ 25 – ಕ್ರಿಸ್‌ಮಸ್
📝 ಭಾನುವಾರದ ಕಾರಣ ರಜೆ ಸೇರ್ಪಡೆ ಆಗದ ಪರ್ವಗಳು
ಕೆಲವು ಪ್ರಮುಖ ಹಬ್ಬಗಳು ರಜೆ ಪಟ್ಟಿಯಲ್ಲಿ ಇರಲಿಲ್ಲ. ಅವು—
ಮಹಾ ಶಿವರಾತ್ರಿ (15.02.2026), ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) — ಇವುಗಳು ಭಾನುವಾರ/ರಜೆಯ ಕಾರಣ ಅಧಿಕೃತ ರಜೆ ಪಟ್ಟಿಯಲ್ಲಿ ಸೇರಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
📌 ಸ್ಥಳೀಯ ರಜೆ (ಕೊಡಗು ಜಿಲ್ಲೆಗೆ ಮಾತ್ರ)
ಕೊಡಗಿನಲ್ಲಿ ಆಚರಿಸಲಾಗುವ ಈ ಕೆಳಗಿನ ಸಂಪ್ರದಾಯಗಳಿಗೆ ಸ್ಥಳೀಯ ರಜೆಗಳು ಘೋಷಿಸಲಾಗಿದೆ:
- ಸೆಪ್ಟೆಂಬರ್ 3 – ಕೈಲ್ ಮುಹೂರ್ತ
- ಅಕ್ಟೋಬರ್ 18 – ತುಳಾ ಸಂಕ್ರಾಂತಿ
- ನವೆಂಬರ್ 26 – ಹುತ್ತರಿ ಹಬ್ಬ
🗂️ನಿರ್ಬಂಧಿತ (Restricted) ರಜೆ – ಗರಿಷ್ಠ ಎರಡು ಮಾತ್ರ
ಸರ್ಕಾರಿ ನೌಕರರು ವರ್ಷದಲ್ಲಿ ಗರಿಷ್ಠ 2 ನಿಬಂಧಿತ ರಜೆಗಳನ್ನು ಬಳಸಿಕೊಳ್ಳಬಹುದು. ನೂತನ ವರ್ಷದಿಂದ ಕ್ರಿಸ್‌ಮಸ್ ಈವ್ ವರೆಗೆ ಒಟ್ಟು 21 ನಿಬಂಧಿತ ರಜೆಗಳ ಪಟ್ಟಿಯನ್ನೂ ಸರ್ಕಾರ ಪ್ರಕಟಿಸಿದೆ.
🏦 ಬ್ಯಾಂಕ್‌ಗಳಿಗೆ ಮಾತ್ರ ವಿಶೇಷ ರಜೆ
ಏಪ್ರಿಲ್ 1, 2026 ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳ ಲೆಕ್ಕಪತ್ರ ಮುಚ್ಚುವಿಕೆಯ ನಿಮಿತ್ತ ರಜೆ ಘೋಷಿಸಲಾಗಿದೆ.










