ಬೇಲೂರು :ದೇಶದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಲು ಬಹುಜನ ಸಮಾಜ ಪಾರ್ಟಿ ಜೊತೆಗೆ ಕೈ ಜೋಡಿಸಿ ಎಂದು ಬೇಲೂರು ತಾಲ್ಲೂಕು ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ಕೆಸಗೋಡು ಪ್ರಕಾಶ್ ಹೇಳಿದರು
ಇಂದು ಬೇಲೂರು ಪಟ್ಟಣದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಆರ್ಥಿಕ ಸಹಾಯ ಆಂದೋಲನಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಹುಜನ ಸಮಾಜ ಪಾರ್ಟಿ ಯಾವುದೇ ಹೆಂಡದ ದೊರೆÀಗಳಿಂದ, ಭೂ ಮಾಲೀಕರಿಂದ ಹಣವನ್ನು ವಸೂಲಿ ಮಾಡದೆ ಪ್ರತಿ ವರ್ಷದಂತೆ ಅಕ್ಕ ಮಾಯಾವತಿಯವರ ಆರ್ಥಿಕ ಸಹಾಯಧನದ ನಿಧಿಯನ್ನು ತಲುಪಿಸುವ ಕೆಲಸವನ್ನು ಇಡೀ ದೇಶ ಮಾಡಿಕೊಂಡು ಬರುತ್ತಿದ್ದು ಅದೇ ರೀತಿ ಇಂದು ಕೂಡ ಚಾಲನೆ ನೀಡಿದ್ದು, ತಾಲ್ಲೂಕಿನ ಪ್ರತಿ ಹಳ್ಳಿ ಮತ್ತು ನಗರದಲ್ಲಿರುವ ಪಕ್ಷದ ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು ಎಂದ ಅವರು, ಭಾರತ ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಜಾರಿ ಮಾಡಬೇಕೆಂಬ ನಿಟ್ಟಿನಲ್ಲಿ ಮಾಯಾವತಿಯವರು ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ಬಹುಜನ ಸಮಾಜ ಪಾರ್ಟಿಯ ಈ ದೇಶದ ಎಲ್ಲಾ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಅದಕ್ಕೆ ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಾಣೇನಹಳ್ಳಿ, ಕಛೇರಿ ಕಾರ್ಯದರ್ಶಿ ಸೋಮಶೇಖರ್, ಹೊನ್ನಯ್ಯ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.










