ಹಾಸನ, November 8: ಉಪರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಸುರಕ್ಷತಾ ಕ್ರಮದ ಅಂಗವಾಗಿ ಡ್ರೋನ್‌ಗಳು (Unmanned Aerial Vehicle – UAV), ಮಾನವರಹಿತ ವಿಮಾನ ವ್ಯವಸ್ಥೆಗಳು (Unmanned Aircraft Systems – UAS) ಹಾಗೂ ಯಾವುದೇ ವಿಧದ ಏರ್ ಬಲೂನ್. (Air Balloons of Any Kind) ಹಾರಾಟಕ್ಕೆ November 9ರಿಂದು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಂದ ಶಿಫಾರಸಿನ ಮೇರೆಗೆ Bharatiya Nagarik Suraksha Sanhita (BNSS) 2023 ರ Section 163 ಅಡಿಯಲ್ಲಿ ಈ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಜಿಲ್ಲೆಯ ಗಗನಮಾರ್ಗದಲ್ಲಿ ಯಾವುದೇ ಖಾಸಗಿ ಅಥವಾ ಸಂಸ್ಥೆಯ ಮಾಲೀಕತ್ವದ ಡ್ರೋನ್ ಕ್ಯಾಮೆರಾ ಅಥವಾ ಮಾನವರಹಿತ ವಿಮಾನ ಹಾರಾಟ ಸಂಪೂರ್ಣ ನಿಷೇಧಿತವಾಗಿದೆ.
ಆದೇಶದಲ್ಲಿ, ರಾಜ್ಯಪಾಲರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರಪತಿಗಳಂತಹ ಪ್ರಮುಖ ವ್ಯಕ್ತಿಗಳ ಭೇಟಿಯ ಸಂದರ್ಭಗಳಲ್ಲಿ ಜಿಲ್ಲೆಯ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಆದೇಶ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.
ವಿಶೇಷ ವಿನಾಯಿತಿ:
ಸರ್ಕಾರಿ ಇಲಾಖೆಗಳಿಂದ ನಡೆಯುವ ಅಧಿಕೃತ ಕಾರ್ಯಗಳು, ಪೊಲೀಸ್ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಗಳು, ಹಾಗೂ ಸರ್ಕಾರದಿಂದ ಪೂರ್ವಾನುಮತಿ ಪಡೆದ ಮಾಧ್ಯಮ ಅಥವಾ ತಾಂತ್ರಿಕ ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
– Kannada Post ವರದಿ, Hassan.










