9.1 C
Munich
Home News ಹಾಸನಾಂಬ ಜಾತ್ರೆಯಲ್ಲಿ ಅಮಾನತುಗೊಂಡ ನಾಲ್ವರು ನೌಕರರ ಅಮಾನತು ವಾಪಸ್

ಹಾಸನಾಂಬ ಜಾತ್ರೆಯಲ್ಲಿ ಅಮಾನತುಗೊಂಡ ನಾಲ್ವರು ನೌಕರರ ಅಮಾನತು ವಾಪಸ್

District Collector K.S. Lathakumari has withdrawn the suspension order of four employees of the Revenue Department who were suspended on charges of dereliction of duty during the Shakti Devi Hassanamba Jatra Mahotsava.

ಹಾಸನ: ಶಕ್ತಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ಲೋಪ ಆರೋಪದಡಿ ಅಮಾನತು ಮಾಡಲಾಗಿದ್ದ ಕಂದಾಯ ಇಲಾಖೆಯ ನಾಲ್ವರು ನೌಕರರ ಅಮಾನತು ಆದೇಶವನ್ನು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ವಾಪಸ್ ಪಡೆದಿದ್ದಾರೆ.

ರಾಜಸ್ವ ನಿರೀಕ್ಷಕಾರದ ಎಂ.ಎಸ್. ಗೋವಿಂದರಾಜು (ಕೆ.ಹೊಸಕೋಟೆ), ಯೋಗಾನಂದ (ಹೊಳೆನರಸೀಪುರ), ಸಂತೋಷ್ ಅಂಬಿಗರ್ (ಗ್ರಾಮ ಆಡಳಿತಾಧಿಕಾರಿ), ಶಿರಾಜ್ ಕುಮಾರ್ (ಗ್ರಾಮ ಆಡಳಿತ ಅಧಿಕಾರಿ) ಅವರ ಅಮಾನತು ಆದೇಶವನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.

ಗೋಲ್ಡನ್ ಪಾಸ್ ಗಳ ಸ್ಕ್ಯಾನ್ ಮಾಡುವಾಗ ಈ ನೌಕರರು ಕರ್ತವ್ಯ ಲೋಪ ಎಸಗಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ಲಿಖಿತ ವರದಿ ನೀಡಿದ್ದರು. ಕಾರ್ಡ್ ಗಳ ಸ್ಕ್ಯಾನ್ ಗಿಂತ ಅಧಿಕ ಭಕ್ತರು ಸರದಿ ಸಾಲಿನಲ್ಲಿ ಬಿಟ್ಟಿದ್ದರೆಂಬ ಗುರುತರ ಆರೋಪ ಇವರ ಮೇಲಿತ್ತು.

error: Content is protected !!