20.1 C
Munich
Home News ಹಾಸನ : ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಹನ್ನೊಂದನೇ ದಿನವೂ ಭಕ್ತರ ಅಬ್ಬರ

ಹಾಸನ : ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಹನ್ನೊಂದನೇ ದಿನವೂ ಭಕ್ತರ ಅಬ್ಬರ

Today, on the eleventh day of the Hassanamba Temple Jatra Mahotsav, a large number of devotees are arriving in Hassan to have darshan of the goddess.

ಹಾಸನ: ಹಾಸನಾಂಬ ದೇವಾಲಯದ ಜಾತ್ರಾ ಮಹೋತ್ಸವದ ಹನ್ನೊಂದನೇ ದಿನವಾದ ಇಂದು ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕಾಗಿ ಹಾಸನಕ್ಕೆ ಆಗಮಿಸುತ್ತಿದ್ದಾರೆ.

➡️ ಧರ್ಮದರ್ಶನದ ಸಾಲುಗಳು ತುಂಬಿ ತುಳುಕುತ್ತಿದ್ದು, ದೇವಾಲಯದ ಸುತ್ತಮುತ್ತ ಭಕ್ತರಿಂದ ಉಕ್ಕಿಹರಿಯುವ ಜನಸಾಗರ ದೃಶ್ಯ ಕಾಣಿಸಿಕೊಂಡಿದೆ.

➡️ ₹1000 ಮತ್ತು ₹300 ವಿಶೇಷ ದರ್ಶನದ ಸಾಲುಗಳು ಸಹ ಸಂಪೂರ್ಣ ಭರ್ತಿಯಾಗಿದ್ದು, ಬ್ಯಾರಿಕೇಡ್ ಮೀರಿ ಹೊರಗೂ ನಿಂತಿರುವ ಭಕ್ತರ ದೀರ್ಘ ಸಾಲುಗಳು ನಗರದಲ್ಲೇ ವಿಸ್ತರಿಸಿರುವುದು ಕಂಡುಬಂದಿದೆ.

➡️ ದೀಪಾವಳಿ ರಜೆಗಳ ಹಿನ್ನೆಲೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದು, ಮುಂಜಾನೆಯಿಂದಲೇ ಸಾವಿರಾರು ಮಂದಿ ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ.

🕉️ ಇಂದಿನ ದರ್ಶನ ವೇಳಾಪಟ್ಟಿ:

ಮಧ್ಯಾಹ್ನ 2.00ರಿಂದ 3.30ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲ್ಪಡುವುದು.

ಮಧ್ಯಾಹ್ನ 3.30ರಿಂದ ಮುಂಜಾನೆ 3.00ರವರೆಗೆ ನಿರಂತರ ಸಾರ್ವಜನಿಕ ದರ್ಶನ.

ನಾಳೆ ಮುಂಜಾನೆ 3.00ರಿಂದ 5.00ರವರೆಗೆ ನೈವೇದ್ಯ ಪೂಜೆ ನಡೆಯಲಿದ್ದು,

ನಾಳೆ ಬೆಳಿಗ್ಗೆ 5.00 ಗಂಟೆಯಿಂದ ಮತ್ತೆ ದರ್ಶನ ಪ್ರಾರಂಭವಾಗಲಿದೆ.

⌛ ನಿನ್ನೆ ರಾತ್ರಿ 8 ಗಂಟೆಗೆ ಮುಚ್ಚಲಾಗಿದ್ದ ಗರ್ಭಗುಡಿ ಬಾಗಿಲು, ಇಂದು ಬೆಳಿಗ್ಗೆ 6 ಗಂಟೆಗೆ ತೆರೆಯಲ್ಪಟ್ಟು ಸಾರ್ವಜನಿಕ ದರ್ಶನ ಆರಂಭಗೊಂಡಿದೆ.

🙏 ಹಾಸನಾಂಬ ತಾಯಿಯ ದರ್ಶನಕ್ಕಾಗಿ ಹರಿದುಬರುತ್ತಿರುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.

error: Content is protected !!