ಹಾಸನ: ನೂರನೇ ವರ್ಷದಲ್ಲಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ಎಂದು ಮಾಜಿ ಶಾಸಕ ಪ್ರೀತಂ ಜೆ.ಗೌಡ ಹೇಳಿದರು. ಕುಟುಂಬ ಸಮೇತ ಹಾಸನಾಂಬೆ ದರ್ಶನ ಮಾಡಿದ ನಂತರ ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದರು.
ಶತಾಬ್ದಿ ವರ್ಷದಲ್ಲಿ, ವೈಚಾರಿಕ ಹಿನ್ನಲೆ ಇರುವಂತ ನಮ್ಮ ಮಾರ್ತೃ ಸಂಸ್ಥೆ ಬಗ್ಗೆ ಹಲವರು ಬೇಡವಾದ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಎಲ್ಲವನ್ನೂ ಮೆಟ್ಟಿನಿಂತು ಧರ್ಮರಕ್ಷಣೆ ರಾಷ್ಟ್ರಿಯತೆ ಬಗ್ಗೆ ಕಲ್ಪನೆ ಕೊಟ್ಟಿರುವುದು ಆರ್‌ಎಸ್‌ಎಸ್ ಎಂದರು.
ಆರ್‌ಎಸ್‌ಎಸ್ ಬಗ್ಗೆ ಮಾತನಾಡಬೇಕಾದರೆ ಬಹಳ ಜವಾಬ್ದಾರಿಯಿಂದ ಮಾತನಾಡಬೇಕು.ಯಾರಿಗೆ ಅದರ ಕಲ್ಪನೆ ಇರೋದಿಲ್ಲವೋ ಅವರು ಹಗುರವಾಗಿ ಮಾತನಾಡುತ್ತಾರೆ. ನಾನು ಯಾರ ಬಗ್ಗೆ ವೈಯಕ್ತಿಕವಾಗಿ ಮಾತನಾಡಲು ಹೋಗೋದಿಲ್ಲ. ಆದರೆ ವಸ್ತು ಸ್ಥಿತಿ ಗೊತ್ತಿಲ್ಲದೆ, ವಿಚಾರ ಗೊತ್ತಿಲ್ಲದೆ, ಯಾರೂ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಕುಟುಕಿದರು.
ಆರ್ ಎಸ್ ಎಸ್ ಬಗ್ಗೆ ಕಾಳಜಿ ಇರುವವರಿಗೆ, ಇಲ್ಲದೇ ಇರುವವರೆಲ್ಲರಿಗೂ ಕೂಡ ಹಾಸನಾಂಬೆ ಸದ್ಬುದ್ಧಿ ಕೊಡಲಿ, ದೇಶದ ವಿಚಾರದಲ್ಲಿ ಒಗ್ಗಟ್ಟಾಗಿರುವಂತಹ ಒಳ್ಳೆಯ ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ ಎಂದರು.
ಒಂದು ವರ್ಗವನ್ನು ಓಲೈಸುವ ಬದಲು ಮಾನಸಿಕತೆ ಬದಲಾಗಬೇಕು, ಆರ್‌ಎಸ್‌ಎಸ್ ಕಾರ್ಯ ಶೈಲಿ ಯಾವ
ಯಾವ ರೀತಿ ಇದೆ, ಹೇಗೆ ಕೆಲಸ ಮಾಡುತ್ತಿದೆ ನೋಡಲಿ ರಾಷ್ಟçದ ಅಖಂಡತೆ ಮತ್ತು ಯುವ ಸಮುದಾಯದಲ್ಲಿ ದೇಶಪ್ರೇಮ ಬೆಳೆಸುವ ಕೆಲಸ ಮಾಡುತ್ತಿದೆ.
ಅದರ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ವಿನಂತಿ ಮಾಡಿದರು. ಆರ್‌ಎಸ್‌ಎಸ್‌ನ ಶಕ್ತಿ ಕಡಿಮೆ ಮಾಡಬಹುದು ಎಂದು ಅದರ ಚಟುವಟಿಕೆ ನಿರ್ಬಂಧಿಸಲು ಹೊರಡಬಾರದು. ಕಲ್ಪನೆಯಲ್ಲಿದ್ದರೆ, ಅದರಿಂದ ಹೊರ ಬರಬೇಕು.
ಅದನ್ನೆಲ್ಲ ಮೀರಿ ಬೆಳೆದಿರುವಂತಹ ಸಂಸ್ಥೆ ಆರ್‌ಎಸ್‌ಎಸ್ ಎಂದು ನುಡಿದರು. ರಾಷ್ಟ್ರಪತಿ, ಪ್ರಧಾನಿ, ಆರ್‌ಎಸ್‌ಎಸ್‌ನಲ್ಲಿ ತಮ್ಮ ಚಟುವಟಿಕೆ ಮಾಡಿ ಉತ್ತಮ ಕೆಲಸ ಮಾಡಲಿಕ್ಕೆ ರೂಪು ಗೊಂಡಿರುವವರು. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಅವರಿಗೆ ಒಂದು ಕಲ್ಪನೆ ಇರಬೇಕು ಎಂಬ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.
ಇದೇ ವಏಳೆ ಕುಟುಂಬ ಸಮೇತ ಹಾಸನಾಂಬೆ ದರ್ಶನ ಮಾಡಿ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದ ಪ್ರೀತಂ, ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹೊಸ ಕಾಯಕಲ್ಪ ಮಾಡಿದ್ದಾರೆ. ಅತಿ ಹೆಚ್ಚು ಭಕ್ತರು ಬರುತ್ತಿದ್ದಾರೆ ಅದರ ನಡುವೆಯೂ ಕೆಲ ಚಾಲೆಂಜಸ್ ಇದೆ. ಹಾಸನಾಂಬೆಗೆ ಬಂದಿರುವ ಎಲ್ಲಾ ಭಕ್ತರಿಗೂ ಸ್ವಾಗತ ಕೋರುತ್ತೇನೆ ಎಂದರು.
ನಾನು ಕೂಡ ಐದು ವರ್ಷ ಶಾಸಕನಾಗಿ ದಿನಕ್ಕೆ 18, 20 ಗಂಟೆ ಕೆಲಸ ಮಾಡಿದ್ದೇನೆ, ನಾವಿದ್ದಾಗ ಒಂದು ರೀತಿ ಬದಲಾವಣೆ ಆಗಿತ್ತು, ವರ್ಷದಿಂದ ವರ್ಷಕ್ಕೆ ಕೆಲ ಬದಲಾವಣೆಗಳು ಆಗುತ್ತವೇ ಇವೆ. ಈ ಬಾರಿಯ ವ್ಯವಸ್ಥೆಗೆ ಉಸ್ತುವಾರಿ ಸಚಿವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದ್ದೇವೆ. ಹಾಸನಕ್ಕೆ ಒಳ್ಳೆಯ ಹೆಸರು ಬರಲಿ ಎನ್ನೋದು ನಮ್ಮ ಕೋರಿಕೆ ಮತ್ತು ಬೇಡಿಕೆ ಎಂದರು.










