10.1 C
Munich
Home News ಹಾಸನಾಂಬ ದರ್ಶನಕ್ಕೆ ಮಹಿಳಾ ಭಕ್ತರ ಹೆಚ್ಚುವರಿ ಪ್ರವಾಹ

ಹಾಸನಾಂಬ ದರ್ಶನಕ್ಕೆ ಮಹಿಳಾ ಭಕ್ತರ ಹೆಚ್ಚುವರಿ ಪ್ರವಾಹ

Due to the Shakti Yojana, a large number of women devotees are coming from different parts of the state to have darshan of Hassanamba. Lakshmi Hebbalkar, Minister for Women and Child Welfare, said that the implementation of the Shakti Yojana has been worthwhile.

ಹಾಸನ: ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಮೂಲೆಗಳಿಂದ ಹಾಸನಾಂಬ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೊಳಿಸಿದ್ದು ಸಾರ್ಥಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಗುರುವಾರ ಸರದಿ ಸಾಲಿನಲ್ಲಿ ಬಂದು ಹಾಸನಾಂಬ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ನಾನು ಉತ್ತರ ಕರ್ನಾಟಕದವಳಾದರೂ ಹಾಸನಾಂಬ ಮಹಾತೆ ಕೇಳಿದ್ದೇನೆ. ವಿಶ್ವದಾದ್ಯಂತ ಹಾಸನಾಂಬಗೆ ಭಕ್ತರಿದ್ದಾರೆ. ಮಧ್ಯಾಹ್ನ 12 ಗಂಟೆ ನಂತರ ಬಂದರೆ ಶಿಷ್ಟಾಚಾರದ ವಾಹನಗಳಲ್ಲಿ ಕರೆದೊಯ್ಯಲು ಸಾಧ್ಯವಾಗುವುದಿಲ್ಲ, ಸಾವಿರ ರೂ. ಟಿಕೆಟ್‌ ಸಾಲಿನಲ್ಲಿ ತೆರಳಬೇಕಾಗುತ್ತದೆಂದು ಹೇಳಿದ್ದರು.

ಹಾಸನಾಂಬ ತಾಯಿ ಎಷ್ಟು ಗಂಟೆಗೆ ಕರೆಸಿಕೊಳ್ಳುತ್ತಾಳೋ ಅಷ್ಟು ಗಂಟೆಗೆ ಬರುತ್ತೇನೆಂದು ಜಿಲ್ಲಾಧಿಕಾರಿಗೆ ಹೇಳಿದ್ದೆ. ದೇವಿ ಮುಂದೆ ಸಚಿವರು, ಸಾಮಾನ್ಯರು ಎಂಬ ತಾರತಮ್ಯ ಸರಿಯಲ್ಲ. ಸಾವಿರ ರೂಪಾಯಿ ಸಾಲಿನಲ್ಲಿ ಬಂದಿದ್ದೇನೆಂದರು.

ಉತ್ತಮ ಮಳೆಯಾಗಿ ರೈತರು ಸಂತೋಷದಿಂದ ಇರಲಿ. ಬೆಳೆಗೆ ಒಳ್ಳೆಯ ಬೆಲೆ ದೊರೆಯಲಿ. ನಮ ದೇಶದ ಮೇಲೆ ಯಾವುದೇ ಕರಿನೆರಳು ಬೀಳಬಾರದು. ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಗೃಹಲಕ್ಷ್ಮೀ ಹಣ ಪಾವತಿ ಸಕಾಲಕ್ಕೆ ಆಗುತ್ತಿದೆ. ಜುಲೈ ತಿಂಗಳ ಹಣ ಮೂರ್ನಾಲ್ಕು ದಿನಗಳ ಹಿಂದೆ ಜಮೆಯಾಗಿದೆ. ಆಗಸ್ಟ್‌ ತಿಂಗಳ ಹಣ ದೀಪಾವಳಿ ಒಳಗೆ ಬಿಡುಗಡೆಯಾಗುತ್ತದೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

error: Content is protected !!