ಹಾಸನಾಂಬ ದರ್ಶನಕ್ಕೆ ಭಕ್ತರ ಹೆಚ್ಚಾದ ನೆರೆದಾಟಕ್ಕೆ ಖುದ್ದು ನಿಯಂತ್ರಣಕ್ಕೆ ನಿಂತ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ

As the number of devotees visiting Hasanamba has increased beyond expectations, District Collector K.S. Lathakumari has taken charge of controlling the devotees. The officials and police are struggling to control the devotees.

ಹಾಸನ: ಹಾಸನಾಂಬೆ ದರ್ಶನಕ್ಕೆ ಭಕ್ತ ಆಗಮನ ನಿರೀಕ್ಷೆಗೂ ಮೀರಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರೇ ಭಕ್ತರ ನಿಯಂತ್ರಣಕ್ಕೆ ನಿಂತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಅಧಿಕಾರಿಗಳು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಭಕ್ತರಿಗೆ ಹಾಸನಾಂಬ ದೇವಿ ಸುಗಮ ದರ್ಶನ ಮಾಡಿಸಲು ಡಿಸಿ ಅವರು ಖದ್ದು ಫೀಲ್ಡ್ಗಿಳಿದಿದ್ದಾರೆ. ದೇವಾಲಯದ ಮುಂಭಾಗ ನಿಂತು ಮೈಕ್‌ನಲ್ಲಿ ಅನೌನ್ಸ್ ಮಾಡಿದ ಜಿಲ್ಲಾಧಿಕಾರಿ ಅವರು, ದೇವಸ್ಥಾನ ಬಾಗಿಲು ಬಳಿಯಿಂದಲೇ ದೇವರನ್ನು ನೋಡುತ್ತಾ ಹೋಗಿ, ಯಾರೂ ನಿಲ್ಲಬೇಡಿ, ಭಕ್ತರ ಸಂಖ್ಯೆ ಜಾಸ್ತಿ ಇದೆ.

ಒಬ್ಬರು ನಿಂತರೆ ಎಲ್ಲರಿಗೂ ತೊಂದರೆ ಆಗುತ್ತದೆ. ಬೇಗ ಬೇಗ ಹೋಗಿ ದೇವರ ದರ್ಶನ ಪಡೆಯಿರಿ ಎಂದು ಮೈಕ್ ಹಿಡಿದು ಅನೌನ್ಸ್ ಮಾಡಿದರು. ಭಕ್ತರು ಸಂಖ್ಯೆ ಹೆಚ್ಚಾದ ಹಿನ್ನಲೆ ಸಿದ್ದೇಶ್ವರಸ್ವಾಮಿ ದೇವಾಲಯದ ಎದುರಿನ ಬಾಗಿಲನ್ನು ಕೆಲಹೊತ್ತು ಬಂದ್ ಮಾಡಲಾಗಿತ್ತು.

ಈ ವೇಳೆ ಜಮಾಯಿಸಿದ್ದ ಭಕ್ತರು, ದಯಮಾಡಿ ಬಾಗಿಲು ತೆರೆಯಿರಿ ಎಂದು ಡಿಸಿ ಅವರಿಗೆ ಮನವಿ ಮಾಡಿದರು. ನಂತರ ಸಿದ್ದೇಶ್ವರಸ್ವಾಮಿ ದೇವಾಲಯದ ಬಾಗಿಲು ತೆರೆಸಿದ ಡಿಸಿ, ಎಲ್ಲರೂ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರು.