13.6 C
Munich
Home ರಾಜ್ಯ ಬೆಂಗಳೂರು: ಸರ್ಕಾರಿ ಶಾಲಾ ಮೈದಾನ ಮಕ್ಕಳ ಆಟೋಟಕ್ಕೆ‌ ಮಾತ್ರ ಬಳಕೆ‌ ಆಗಬೇಕು: ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ...

ಬೆಂಗಳೂರು: ಸರ್ಕಾರಿ ಶಾಲಾ ಮೈದಾನ ಮಕ್ಕಳ ಆಟೋಟಕ್ಕೆ‌ ಮಾತ್ರ ಬಳಕೆ‌ ಆಗಬೇಕು: ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ- ಶಿಕ್ಷಣ ಇಲಾಖೆ ಸ್ಪಷ್ಟ ಸುತ್ತೋಲೆ

ಬೆಂಗಳೂರು: ಸರ್ಕಾರಿ ಶಾಲಾ ಮೈದಾನಗಳಲ್ಲಿ ಖಾಸಗಿ ಅಥವಾ ಶೈಕ್ಷಣಿಕೇತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ನಿಷೇಧಿಸಿದೆ.

ಆಯುಕ್ತರು ಎಸ್.ಆರ್. ಉಮಾಶಂಕರ್ ಅವರು ಹೊರಡಿಸಿದ ಸುತ್ತೋಲೆಯಲ್ಲಿ,

“ಶಾಲಾ ಮೈದಾನ ಮತ್ತು ಆವರಣವು ಕೇವಲ ವಿದ್ಯಾರ್ಥಿಗಳ ಶೈಕ್ಷಣಿಕ, ಪತ್ಯೇತರ ಚಟುವಟಿಕೆಗಳು, ಆಟೋಟ ಮತ್ತು ವ್ಯಾಯಾಮ ಉದ್ದೇಶಗಳಿಗೆ ಮಾತ್ರ ಬಳಸಬೇಕು,” ಎಂದು ಸೂಚಿಸಲಾಗಿದೆ.

ಚಾಮರಾಜಪೇಟೆ ಸರ್ಕಾರಿ ಪ್ರೌಢಶಾಲೆಯ ಮೈದಾನವನ್ನು ಖಾಸಗಿ ಕಾರ್ಯಕ್ರಮಕ್ಕೆ ನೀಡಲು ಬಂದ ಮನವಿಯ ಹಿನ್ನೆಲೆ ಈ ಸ್ಪಷ್ಟೀಕರಣ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಆಯುಕ್ತರು,

 “ಯಾವುದೇ ಖಾಸಗಿ ಅಥವಾ ಶೈಕ್ಷಣಿಕೇತರ ಉದ್ದೇಶಗಳಿಗೆ ಶಾಲಾ ಆವರಣ ಬಳಸಲು ಅನುಮತಿ ನೀಡಬಾರದು, ಇಂತಹ ಮನವಿಗಳನ್ನು ಕಛೇರಿಗೆ ಕಳುಹಿಸುವುದೂ ಬೇಡ,” ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!