10.1 C
Munich
Home News ಹಾಸನ : ಹಾಸನಾಂಬ ಜಾತ್ರೆ ಹಿನ್ನೆಲೆ ಸಚಿವ ಕೃಷ್ಣ ಬೈರೇಗೌಡರಿಂದ ತುರ್ತು ಸಭೆ — ಅಧಿಕಾರಿಗಳಿಗೆ...

ಹಾಸನ : ಹಾಸನಾಂಬ ಜಾತ್ರೆ ಹಿನ್ನೆಲೆ ಸಚಿವ ಕೃಷ್ಣ ಬೈರೇಗೌಡರಿಂದ ತುರ್ತು ಸಭೆ — ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳು

In an emergency meeting held at the District Collector's Office today, District In-charge Minister Krishna Byre Gowda gave several important instructions to the officials.

ಹಾಸನ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ತುರ್ತು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ಹಾಸನಾಂಬ ದೇವಿ ದರ್ಶನೋತ್ಸವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಮತ್ತು ವ್ಯವಸ್ಥಾಪನದ ಕುರಿತು ಸಚಿವರು ಸ್ಪಷ್ಟ ನಿರ್ದೇಶನ ನೀಡಿ, “ಅನಾಹುತ ನಡೆಯುವ ಮುನ್ನವೇ ಎಚ್ಚರಿಕೆ ಕ್ರಮ ವಹಿಸಬೇಕು.

ಅನಾಹುತ ತಡೆಯುವುದೇ ನಮ್ಮ ಕರ್ತವ್ಯ. ಅಧಿಕಾರಿಗಳು ನಾಯಕತ್ವ ಗುಣದೊಂದಿಗೆ ಕಾರ್ಯನಿರ್ವಹಿಸಬೇಕು,” ಎಂದು ಹೇಳಿದರು.

ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದೆಂದು ತಿಳಿಸಿದ ಸಚಿವರು,
“ಭದ್ರತಾ ಲೋಪವನ್ನು ಯಾವುದೇ ರೀತಿಯಲ್ಲೂ ಸಹಿಸಲಾಗುವುದಿಲ್ಲ. ದೇವಾಲಯಕ್ಕೆ ಪ್ರತಿ ದಿನ ಆಗಮಿಸುವ ಮತ್ತು ನಿರ್ಗಮಿಸುವ ಭಕ್ತರ ಸಂಖ್ಯೆಯ ಮೇಲೆ ನಿಗಾವಹಿಸಬೇಕು. ಟ್ರಾಫಿಕ್ ನಿರ್ವಹಣೆಯಲ್ಲೂ ಅಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು,” ಎಂದು ಸೂಚಿಸಿದರು.

ಇನ್ನೂ ದೇವಾಲಯದ ಒಳಗೆ ಎಸ್ಕಾರ್ಟ್ ವಾಹನಗಳಿಗೆ ಅವಕಾಶ ನೀಡಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಎಸ್. ಲತಾಕುಮಾರಿ, ಎಸ್ಪಿ ಮಹಮದ್ ಸುಜೀತಾ, ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

– ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಹಾಸನ

error: Content is protected !!