ಅರಕಲಗೂಡು: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್ ಶಿವಣ್ಣಗೆ ಅಭಿನಂದನೆ – ಜೆಡಿಎಸ್ ಮುಖಂಡ ಮಾದೇಶ್ ಕಾಂಗ್ರೆಸ್ ಸೇರ್ಪಡೆ

A grand felicitation program was held in Ramanathapuram today by the Arakalgudu Assembly Constituency Congress Committee for Patel Shivappa, who has been appointed as the Chairman of the Hassan Urban Development Authority.

ಅರಕಲಗೂಡು: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ಪಟೇಲ್ ಶಿವಪ್ಪ ಅವರಿಗೆ ಅರಕಲಗೂಡು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಮನಾಥಪುರದಲ್ಲಿ ಇಂದು ಅದ್ದೂರಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್, ಅರಕಲಗೂಡು ವಿಧಾನಸಭಾ ಅಭ್ಯರ್ಥಿ ಶ್ರೀ ಶ್ರೀಧರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಸೋಮಶೇಖರ್ ಹಾಗೂ ಶ್ರೀ ರಾಜೇಗೌಡ ಭಾಗವಹಿಸಿ, ಪಟೇಲ್ ಶಿವಣ್ಣ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಣಪತಿ, ಹಾಗೂ ಮುಖಂಡರಾದ ಪುಟ್ಟಯ್ಯ, ಗುರುಮೂರ್ತಿ, ದೊಡ್ಡೇಗೌಡ, ಪ್ರಶಾಂತ್, ಲಕ್ಷ್ಮಣ, ರಂಗನಾಥ್, ದಶರತ್, ಸುಭಾನ್, ಸಲೀಂ, ಶ್ರೀಧರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ವೇಳೆ ರಾಮನಾಥಪುರ ಭಾಗದ ಜೆಡಿಎಸ್ ಮುಖಂಡ ಮಾದೇಶ್ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಪಟೇಲ್ ಶಿವಣ್ಣ ಅವರ ನೇತೃತ್ವದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರವು ಜನಪರ ಯೋಜನೆಗಳಿಗೆ ಹೆಚ್ಚು ವೇಗ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.