11.8 C
Munich
Home News ಅರಕಲಗೂಡು: ವೃದ್ಧಾಶ್ರಮದಲ್ಲಿ 76ನೇ ಜನ್ಮದಿನ ಆಚರಿಸಿದ ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ – ವೃದ್ಧರಿಗೆ ಅವಶ್ಯಕ...

ಅರಕಲಗೂಡು: ವೃದ್ಧಾಶ್ರಮದಲ್ಲಿ 76ನೇ ಜನ್ಮದಿನ ಆಚರಿಸಿದ ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ – ವೃದ್ಧರಿಗೆ ಅವಶ್ಯಕ ವಸ್ತುಗಳ ವಿತರಣೆ

Music scholar R.K. Padmanabha said that humans should cultivate the virtue of responding to the pain of the helpless.

ಅರಕಲಗೂಡು: ಮನುಷ್ಯ ಅಸಹಾಯಕರ ನೋವಿಗೆ ಸ್ಪಂದಿಸುವ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಹೇಳಿದರು.

ಪಟ್ಟಣ ಹೊರ ವಲಯದ ಶಂಭುನಾಥಪುರದಲ್ಲಿರುವ ಮಧುಶ್ರೀ ವೃದ್ಧಾಶ್ರಮದಲ್ಲಿ ವೃದ್ಧರಿಗೆ ವಿವಿಧ ವಸ್ತುಗಳನ್ನು ವಿತರಿಸಿ ಇತ್ತಿಚೆಗೆ ತಮ್ಮ 76ನೇ ಜನ್ಮ ದಿನ ಆಚರಿಸಿಕೊಂಡು ಮಾತನಾಡಿದ ಅವರು, ಬದುಕು ನಶ್ವರ, ಆಸ್ತಿ, ಅಂತಸ್ತು ಗಳಿಸುವುದರಲ್ಲೇ ಕಳೆಯದೇ ಸಂಪಾದನೆಯ ಕೆಲ ಭಾಗವನ್ನು ಅಸಹಾಯಕರಿಗೆ ಹಂಚುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ವೃದ್ಧಾಶ್ರಮಗಳನ್ನು ಮುನ್ನಡೆಸುವುದು ಕಷ್ಟದ ಕೆಲಸ. ಆದರೆ ಬಡ ಜನತೆಯ ಸೇವೆಯೇ ದೇವರ ಸೇವೆ ಇದ್ದಂತೆ ಎಂಬುದನ್ನು ಮನಗಂಡು ಸಾವಿತ್ರಮ್ಮ, ಮಧು ಮತ್ತು ಪ್ರಕಾಶ್ ಅವರು ತಮ್ಮ ನಿಷ್ಕಲ್ಮಶವಾದ ಪ್ರೀತಿಯ ಭಾವನೆಗಳನ್ನು ಮೈಗೂಡಿಸಿಕೊಂಡು ವೃದ್ಧಾಶ್ರಮ ತೆರೆದು ಅನೇಕ ವೃದ್ಧರಿಗೆ ಪ್ರತಿದಿನ ಊಟೋಪಚಾರ, ವೈದ್ಯಕೀಯ ಸೇವೆ ನೀಡುತ್ತಾ ದೇವರನ್ನು ಕಾಣುತ್ತಿದ್ದಾರೆ.

ಯೌವನ ನಿರಂತರವಾಗಿ ಉಳಿಯುವುದಿಲ್ಲ ಎನ್ನುವ ಸತ್ಯ ಅರಿತು ವೃದ್ಧರ ಕಷ್ಟಕ್ಕೆ ಮಿಡಿಯುತ್ತಿರುವ ಜೀವಗಳಿಗೆ ದೇವರ ಆಶೀರ್ವಾದ ಸದಾ ಇರುತ್ತದೆ. ಈ ಆಶ್ರಮಕ್ಕೆ ಪ್ರತಿವರ್ಷ 10 ಸಾವಿರ ನಗದು ನೀಡುತ್ತೇನೆ. ಇದೀಗ ವೃದ್ಧರಿಗೆ ಬೆಚ್ಚನೆಯ ಬೆಡ್‌ಶಿಟ್ ಹೊದಿಕೆ, ಟೋಪಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಂಗೀತ ಹಾಗೂ ದೇವರ ಸ್ಮರಣೆ ಆಲಿಸಲು ಸ್ಪೀಕರ್ ಯಂತ್ರ, ರಾಮಾಯಣ, ಮಹಾಭಾರತ ಪುಸ್ತಗಳನ್ನು ನೀಡಿರುವೆ. ತೊಡಗಿದ್ದಾರೆ.

ಸಂಗೀತ ವಿದ್ವಾನ್ ಆರ್.ಕೆ.ಪಿ.  ರಮೇಶ್ ವಾಟಾಳ್, ಪ್ರವೀಣ್, ಗುರು, ನಾಗೇಶ್, ಯತಿರಾಜ್, ಪುನೀತ್ ಗೌಡ, ಆಟೋ ಧರ್ಮ, ವಿಜಿ, ಮಂಜು, ನರಸಿಂಹ, ನಾಗೇಂದ್ರ, ರವಿವರ್ಧನ್,  ನಟರಾಜ್, ವಿನೋದ್ ಕುಮಾರ್, ಸುರೇಶ್, ಚಂದ್ರು ಇತರರಿದ್ದರು.

error: Content is protected !!