10.4 C
Munich
Home News ಹಾಸನ : ಬೇಲೂರು ಗಣೇಶ ವಿಗ್ರಹ ಅವಮಾನ ಪ್ರಕರಣದ ಹಿನ್ನೆಲೆ ಬಂದ್ – ಪ್ರತಿಭಟನೆ, ದೇವಾಲಯ...

ಹಾಸನ : ಬೇಲೂರು ಗಣೇಶ ವಿಗ್ರಹ ಅವಮಾನ ಪ್ರಕರಣದ ಹಿನ್ನೆಲೆ ಬಂದ್ – ಪ್ರತಿಭಟನೆ, ದೇವಾಲಯ ಶುದ್ದೀಕರಣ

Belur town is under complete lockdown today due to protests against the incident of throwing slippers at the Ganesh idol at the Sri Varasiddhi Vinayaka Swamy Temple located in the municipal premises.

ಬೇಲೂರು : ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾಕಿದ ಘಟನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಬೇಲೂರು ಪಟ್ಟಣ ಇಂದು ಸಂಪೂರ್ಣ ಬಂದ್ ಆಗಿದೆ. ವಿವಿಧ ಹಿಂದೂಪರ ಸಂಘಟನೆಗಳು ಕರೆ ನೀಡಿದ ಈ ಬಂದ್‌ಗೆ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿದ್ದಾರೆ.

ಬೆಳಗ್ಗೆ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಿಂದ ಮಂಗಳವಾದ್ಯಗಳೊಂದಿಗೆ ಭವ್ಯ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು. ನೂರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಾದ ಎಚ್.ಕೆ. ಸುರೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಕ್ತರ ಮನೋಭಾವಕ್ಕೆ ಬೆಂಬಲ ನೀಡಿದರು.

ಘಟನೆಯ ಹಿನ್ನೆಲೆಯಲ್ಲಿ ದೇವಾಲಯ ಶುದ್ದೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಕಲ್ಯಾಣಿಯಿಂದ ಅರ್ಚಕರು ಗಂಗೆ ತಂದು ದೇವಾಲಯವನ್ನು ಸಂಪೂರ್ಣ ಸ್ವಚ್ಚಗೊಳಿಸಿ ಅಭಿಷೇಕ, ಹೋಮ–ಹವನ ನಡೆಸಲು ಭಕ್ತರು ಸಿದ್ಧತೆ ಮಾಡುತ್ತಿದ್ದಾರೆ. “ನಿತ್ಯ ರಾತ್ರಿ ದೇವಾಲಯಕ್ಕೆ ಬೀಗ ಹಾಕುತ್ತಿದ್ದರೂ ಹಬ್ಬದ ಕಾರಣದಿಂದ ಆ ದಿನ ಬೀಗ ಹಾಕಿರಲಿಲ್ಲ. ಇನ್ನು ಮುಂದೆ ಹೆಚ್ಚುವರಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು,” ಎಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ವಿರೂಪಾಕ್ಷ ತಿಳಿಸಿದ್ದಾರೆ.

ಆರೋಪಿ ಮಹಿಳೆ ಹಾಸನದ ವಿಜಯನಗರದ ಲೀಲಮ್ಮ ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ. ಆಕೆಯ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ ಎಂಬ ಮಾಹಿತಿ ದೊರೆತಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

error: Content is protected !!