14.6 C
Munich
Home News ಬೇಲೂರು: ಗಣೇಶ ವಿಗ್ರಹ ಅವಮಾನ ಪ್ರಕರಣ – ಆರೋಪಿ ಲೀಲಮ್ಮ ಕುಟುಂಬದ ಕಣ್ಣೀರಿನ ಹೇಳಿಕೆ

ಬೇಲೂರು: ಗಣೇಶ ವಿಗ್ರಹ ಅವಮಾನ ಪ್ರಕರಣ – ಆರೋಪಿ ಲೀಲಮ್ಮ ಕುಟುಂಬದ ಕಣ್ಣೀರಿನ ಹೇಳಿಕೆ

The family of Leelamma, who is in custody on charges of placing slippers on the Sri Varasiddhi Vinayaka idol in the municipal premises, has expressed their grief to the media.

ಬೇಲೂರು : ಪುರಸಭೆ ಆವರಣದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ವಿಗ್ರಹಕ್ಕೆ ಚಪ್ಪಲಿ ಇಟ್ಟ ಆರೋಪದ ಮೇಲೆ ವಶದಲ್ಲಿರುವ ಲೀಲಮ್ಮ ಅವರ ಕುಟುಂಬವು ಮಾಧ್ಯಮದ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದೆ.

ಲೀಲಮ್ಮ ಅವರಿಗೆ ಕಳೆದ ಆರು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆ ಇತ್ತು. “ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಔಷಧಿ ಸೇವಿಸಲು ನಿರಾಕರಿಸುತ್ತಿದ್ದರು, ಕೆಲವೊಮ್ಮೆ ರಸ್ತೆಯಲ್ಲೇ ಮಲಗುತ್ತಿದ್ದರು,” ಎಂದು ತಾಯಿ ಲಕ್ಷ್ಮಮ್ಮ ಕಣ್ಣೀರಿಟ್ಟು ವಿವರಿಸಿದರು.

“ಮೊನ್ನೆ ಬೇಲೂರಿಗೆ ಹೋಗುವ ಮುಂಚೆ ಮನೆಯಲ್ಲಿ ಸ್ನಾನ ಮಾಡಿ ಹೊರಟಿದ್ದರು. ಇಂತಹ ಕೆಲಸ ಮಾಡುತ್ತಾರೆ ಎಂದು ನಾವು ಊಹಿಸಿರಲಿಲ್ಲ,” ಎಂದು ಕುಟುಂಬ ಸದಸ್ಯರು ಹೇಳಿದರು.

error: Content is protected !!