12.7 C
Munich
Home ಕ್ರೈಮ್‌ ಬೇಲೂರು: ಗಣೇಶ ವಿಗ್ರಹ ಅವಮಾನ – ಪೊಲೀಸ್ ವಶಕ್ಕೆ ಪಡೆದ ಮಹಿಳೆ ಹೆಸರು ಲೀಲಮ್ಮ

ಬೇಲೂರು: ಗಣೇಶ ವಿಗ್ರಹ ಅವಮಾನ – ಪೊಲೀಸ್ ವಶಕ್ಕೆ ಪಡೆದ ಮಹಿಳೆ ಹೆಸರು ಲೀಲಮ್ಮ

Police have taken into custody Lilamma, a resident of Vijayanagar (Hassan), in connection with the case of insulting a Ganesha idol in Belur.

ಬೇಲೂರು : ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ವಿಜಯನಗರ (ಹಾಸನ) ನಿವಾಸಿ ಲೀಲಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೇಲೂರು ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಡುವ ಮೂಲಕ ಅವಮಾನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಹಾಸನ ಜಿಲ್ಲಾ ಎಸ್ಪಿ ಮೊಹಮದ್ ಸುಜೀತಾ ಮಾಹಿತಿ ನೀಡಿದ್ದು ಹೀಗಿದೆ: ನಿನ್ನೆ ರಾತ್ರಿ 8.30ರ ಸುಮಾರಿಗೆ ಲೀಲಮ್ಮ ಹಾಸನದಿಂದ ಬಸ್‌ನಲ್ಲಿ ಬೇಲೂರಿಗೆ ತೆರಳಿದ್ದರು. ನಂತರ ಚಿಕ್ಕಮಗಳೂರಿಗೆ ಹೋಗಿ, ಅಲ್ಲಿಂದ ಪುನಃ ಬೇಲೂರಿಗೆ ಮರಳಿದ್ದಾರೆ. ಪುರಸಭೆ ಆವರಣದ ದೇವಾಲಯಕ್ಕೆ ಪ್ರವೇಶಿಸಿ ವಿಗ್ರಹದ ಬಳಿ ಅಸಭ್ಯ ಕೃತ್ಯ ಎಸಗಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಬಳಿಕ ಅವರು ಹಾಸನಕ್ಕೆ ಮರಳಿದ್ದರು.

ಇಂದು ಬೆಳಗ್ಗೆ ವಿಜಯನಗರದಲ್ಲಿರುವ ಅವರ ಮನೆ ಬಳಿ ಪೊಲೀಸರು ಲೀಲಮ್ಮ ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೀಲಮ್ಮ ಮಾನಸಿಕವಾಗಿ ಸ್ಥಿರರಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ ನಿಖರ ಮಾಹಿತಿ ಪಡೆಯಲಾಗುವುದು ಎಂದು ಎಸ್ಪಿ ಹೇಳಿದ್ದಾರೆ

error: Content is protected !!