ಹಾಸನ:  ಅರಳೇಪೇಟೆ ನಿವಾಸಿಗಳಿಂದ ಪ್ರಸಾದ ವಿತರಣೆ

ಹಾಸನ: ನಗರದ ಪೆಂಡಾಲ್ ಗಣಪತಿ ವಿಸರ್ಜನೆ ಮೆರವಣಿಗೆ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಅರಳೇಪೇಟೆ ರಸ್ತೆ ನಿವಾಸಿಗಳು ಪ್ರಸಾದ ರೂಪದಲ್ಲಿ ಸಾವಿರಾರು ಜನರಿಗೆ ಅನ್ನದಾನ ಮಾಡಿದರು. ಈ ವೇಳೆ ಟೈಲರ್ ಅಂಗಡಿ ಮಾಲೀಕ ವೆಂಕಟೇಶ್ ಮಾತನಾಡಿ, 2017ರಿಂದ ನಿರಂತರವಾಗಿ ನಗರದ ಸ್ಥಳೀಯ ನಿವಾಸಿಗಳು ಸೇರಿ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತಿದೆ. ಸುಮಾರು 3 ಸಾವಿರ ಜನರು ಪ್ರಸಾದ ಸ್ವೀಕರಿಸಿದ್ದು, ನಾಡಿನ ಜನತೆಗೆ ಒಳ್ಳೆಯದು ಮಾಡಲಿ ಎಂದು ಗಣೇಶನನ್ನು ಪ್ರಾರ್ಥಿಸಲಾಗಿದೆ ಎಂದರು. ಮುಂದಿನ ವರ್ಷದಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

ಹಾಗೆಯೇ ಸಹ್ಯಾದ್ರಿ ವೃತ್ತದ ಬಳಿ ಕಾರು ಚಾಲಕರು ಮತ್ತು ಟೆಂಪೋ ಮಾಲೀಕರು ಕೂಡ ಅನ್ನದಾನ ಮಾಡಿದರು. ನಾರಾಯಣಗೌಡ, ಸಯ್ಯದ್ ಅಕ್ಮಲ್, ಸ್ಥಳೀಯರಾದ ಚಂದ್ರಶೇಖರ್, ನಾರಾಯಣ್ ಭಗವಾನ್, ಮದನ್‌ಕೀರ್ತಿ, ಕುಮಾರ್, ಕೀರ್ತಿ, ವೀಣಾ ನಟರಾಜು, ಬಿ.ಎನ್. ಪುಟ್ಟಮ್ಮ, ಲಕ್ಷ್ಮೀ, ಜ್ಯೋತಿ, ಜಯಂತಿ, ಮಂಜುನಾಥ್, ಮನು, ಶಂಕರ್ ರಾವ್, ಪ್ರವೀಣ್ ಇದ್ದರು.