10.1 C
Munich
Home News ಹಾಸನ: ಮ್ಯಾಟ್ರಿಕ್ಸ್ ಅಬಾಕಸ್ ಸ್ಪರ್ಧೆಯಲ್ಲಿ ಸ್ಕಾಲರ್ಸ್‌ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಹಾಸನ: ಮ್ಯಾಟ್ರಿಕ್ಸ್ ಅಬಾಕಸ್ ಸ್ಪರ್ಧೆಯಲ್ಲಿ ಸ್ಕಾಲರ್ಸ್‌ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಹಾಸನ:  ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿಗಳು ಆಗಸ್ಟ್ 2025ರಲ್ಲಿ ನಡೆದ ಮ್ಯಾಟ್ರಿಕ್ಸ್ ಅಬಾಕಸ್ ಸ್ಪರ್ಧೆಯಲ್ಲಿ ಗಣನೀಯ ಸಾಧನೆ ಮೆರೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮಣ್ವಿತಾ ಎಸ್. ಗೌಡ (5ನೇ ತರಗತಿ) ಹಾಗೂ ಆರೂಷ್ ಎಸ್. (7ನೇ ತರಗತಿ) ತಮ್ಮ ಅದ್ಭುತ ಪ್ರದರ್ಶನದಿಂದ ಗೆದ್ದುಕೊಂಡರೆ, ದ್ವಿತೀಯ ಸ್ಥಾನವನ್ನು ಮಣ್ವಿತಾ ಡಿ.ವಿ. (5ನೇ ತರಗತಿ), ಸಾನಿಧ್ಯ ಎಸ್. (3ನೇ ತರಗತಿ), ಸತ್ವಿಕ್ ಎಸ್. (1ನೇ ತರಗತಿ) ಮತ್ತು ಆಯುಷ್ (5ನೇ ತರಗತಿ) ತಮ್ಮ ಅಚ್ಚರಿ ಮೂಡಿಸುವ ಸಾಮರ್ಥ್ಯದಿಂದ ಗಳಿಸಿದ್ದಾರೆ.

ಶಾಲೆಯ ಸಂಸ್ಥಾಪಕ ಡಾ. ಎಚ್.ಎನ್. ಚಂದ್ರಶೇಖರ್ ಅವರು ಸಂತಸ ವ್ಯಕ್ತಪಡಿಸಿ, “ವಿದ್ಯಾರ್ಥಿಗಳ ಈ ಸಾಧನೆ ಕೇವಲ ಶಾಲೆಯಷ್ಟೇ ಅಲ್ಲ, ಪೋಷಕರಿಗೂ ಸಮಾಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಅಬಾಕಸ್‌ ಮೂಲಕ ಮಕ್ಕಳ ಗಣಿತ ಕೌಶಲ ಮಾತ್ರವಲ್ಲದೆ, ಅವರ ಏಕಾಗ್ರತೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವೂ ಹೆಚ್ಚುತ್ತಿದೆ. ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಗಳಿಸಲಿ ಎಂಬುದು ನನ್ನ ಆಶಯ,” ಎಂದು ಹೇಳಿದರು.

ಇದೇ ವೇಳೆ ಶಾಲೆಯ ಕಾರ್ಯದರ್ಶಿ  ಮಮತಾ ಚಂದ್ರಶೇಖರ್ ಅವರು ತಮ್ಮ ಸಂತಸ ಹಂಚಿಕೊಂಡು, “ಪ್ರತಿ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಬೆಳೆಸುವುದು ನಮ್ಮ ಕರ್ತವ್ಯ. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಾಧಿಸಿದ ಗೌರವವು ಅವರ ಪರಿಶ್ರಮದ ಪ್ರತಿಫಲ ಎಂದರು.

error: Content is protected !!