6.9 C
Munich
Home News ಚಿಕ್ಕಮಗಳೂರು : ಮಹಿಳೆ ಸರ ಕದಿಯಲೆತ್ನಿಸಿದವನ ಬೆನ್ನಟ್ಟಿ ಹಿಡಿದರು

ಚಿಕ್ಕಮಗಳೂರು : ಮಹಿಳೆ ಸರ ಕದಿಯಲೆತ್ನಿಸಿದವನ ಬೆನ್ನಟ್ಟಿ ಹಿಡಿದರು

ಚಿಕ್ಕಮಗಳೂರು : ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಸರ ಕದಿಯಲು ಯತ್ನಿಸಿದ ಯುವಕನನ್ನು ಸ್ಥಳೀಯರು ಬೆನ್ನಟ್ಟಿಬಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಲ್ಪಾ ಎಂಬ ಮಹಿಳೆಯ ಕುತ್ತಿಗೆಯಿಂದ 30 ಗ್ರಾಂ ತೂಕದ ಸರ ಕದಿಯಲು ಹೇಮಂತ್ ಎಂಬ ಯುವಕ ಬೈಕ್‌ನಲ್ಲಿ ರೈಡಿಂಗ್ ನಲ್ಲೇ ಕೈ ಹಾಕಿದ್ದಾನೆ. ಆಕಸ್ಮಿಕವಾಗಿ ನಡೆದ ಈ ಘಟನೆಗೆ ಮಹಿಳೆ ಅಳಲು ಕೂಗುತ್ತಿದ್ದಂತೆ ಸ್ಥಳೀಯರು ಓಡಿಬಂದು ಸಹಾಯಕ್ಕೆ ಧಾವಿಸಿದರು.

ಜನರು ಒಟ್ಟಾಗಿ ಸೇರಿದ್ದನ್ನು ಕಂಡ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದರೂ, ಸ್ಥಳೀಯರು ಮತ್ತು ಪೊಲೀಸರ ಮಧ್ಯದ ಸಂಪರ್ಕದಿಂದ ಕುರುಕುಬಳ್ಳಿ ಗ್ರಾಮದ ಬಳಿ ಅವನನ್ನು ಬಂಧಿಸಲಾಯಿತು.

ಪ್ರಸ್ತುತ ಕಳ್ಳನನ್ನು ಹರಿಹರಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

error: Content is protected !!