4.2 C
Munich
Home News ಹಾಸನ: ಗೂಡ್ಸ್ ವಾಹನ ಚಾಲಕನ ದುರ್ವರ್ತನೆ – 10 ಕಿಮೀ ಚೇಸ್ ಮಾಡಿ ಯುವಕರು

ಹಾಸನ: ಗೂಡ್ಸ್ ವಾಹನ ಚಾಲಕನ ದುರ್ವರ್ತನೆ – 10 ಕಿಮೀ ಚೇಸ್ ಮಾಡಿ ಯುವಕರು

ಹಾಸನ: ಗೂಡ್ಸ್ ಚಾಲಕನ ಬೇಜವಾಬ್ದಾರಿಯಿಂದ ಬೈಕ್ ಗೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಹಾಸನ ನಗರದ ಕೆ.ಆರ್. ಪುರಂನಲ್ಲಿ ನಡೆದಿದೆ.‌ ಬೈಕ್ ಸವಾರರು ಜಸ್ಟ್ ಮಿಸ್ ಆಗಿದ್ದಾರೆ. ವಾಹನ ಗುದ್ದಿ ಸವಾರರು ಕೆಳಗೆ ಬಿದ್ದರೂ ವಾಹನ ನಿಲ್ಲಿಸದೆ ಎಸ್ಕೇಪ್ ಆಗಲು ಯತ್ನಿಸಿದ್ದು ಸ್ಥಳದಲ್ಲಿದ್ದ ಯುವಕರು ಹತ್ತು ಕಿಲೋ ಮೀಟರ್ ಚೇಸ್ ಮಾಡಿ ಚಾಲಕನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಚಾಲಕನ ದುರ್ವರ್ತನೆ ಜನರ ಪ್ರಾಣಕ್ಕೆ ಕುತ್ತು ತಂದಿದ್ದು ಪ್ರಾಣ ಹಾನಿಯಿಂದ ಜನರು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಚಾಲಕನ ನಿರ್ಲಕ್ಷ್ಯ ಚಾಲನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

error: Content is protected !!