10.1 C
Munich
Home News ಹಾಸನ: ಕರಾಟೆ ಪಟುಗಳ ಸೊಗಸಾದ ಸಾಧನೆ

ಹಾಸನ: ಕರಾಟೆ ಪಟುಗಳ ಸೊಗಸಾದ ಸಾಧನೆ

ಹಾಸನ : ಬೆಂಗಳೂರಿನ ವರ್ತೂರುನಲ್ಲಿ ಸೈಖಾಯ್ ಬೆಟ್ಟವೋ ಗೌಜು ರೆಯ್ಯೂ ಕರಾಟೆ ಡುಂ ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಸೆಪ್ಟೆಂಬರ್ 14, 2025ರಂದು ನಡೆದ ಪ್ರಥಮ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಹಾಸನದ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಕರಾಟೆ ಪಟುಗಳು ವಿವಿಧ ಬೆಲ್ಟ್ ಮತ್ತು ವಯೋಮಾನದ ವಿಭಾಗಗಳಲ್ಲಿ ಮೆರೆದಾಡಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲೆಗೆ, ಸಂಸ್ಥೆಗೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಈ ಪಟುಗಳಿಗೆ ಕರಾಟೆ ಡಾನ್ ಶ್ರೀ ಮಹದೇವ ಅವರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಶರತ್ಚಂದ್ರ, ಕಾರ್ಯದರ್ಶಿ ನಿರಂಜನ್, ಸದಸ್ಯರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.

error: Content is protected !!