11.3 C
Munich
Home News ಚನ್ನರಾಯಪಟ್ಟಣ: ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದು ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಾಯ

ಚನ್ನರಾಯಪಟ್ಟಣ: ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದು ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಾಯ

ಚನ್ನರಾಯಪಟ್ಟಣ: ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದ ಪರಿಣಾಮ ವ್ಯಕ್ತಿ  ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡ ಘಟನೆ ಶನಿವಾರ ತಾಲ್ಲೂಕಿನ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೈಕ್ ಚಾಲನೆ ಮಾಡುತ್ತಿದ್ದ ನಾಗಮಂಗಲ ತಾಲ್ಲೂಕಿನ ಎಂ. ಕೋಡಿಹಳ್ಳಿ ಗ್ರಾಮದ ಹನುಮಂತೆಗೌಡ (54) ಮೃತ ವ್ಯಕ್ತಿ.

ಹಿಂಬದಿಯಲ್ಲಿ ಕುತ್ತಿದ್ದ ತುರುವೆಕೆರೆ ತಾಲ್ಲೂಕು ಬಿಗ್ಗೇನಹಳ್ಳಿ ಶಾಂತಕುಮಾರ್ ಗಾಯಗೊಂಡಿದ್ದಾರೆ.

ಚನ್ನರಾಯಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದಾಗ ಹಿರೀಸಾವೆಯ ಅಮ್ಮಕುಟೀರ ಬಳಿ ನಾಯಿ ಅಡ್ಡ ಬಂದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದ್ದೆ.

ಇವರು ಹಿರೀಸಾವೆ ಹೋಬಳಿ ಬ್ಯಾಡರಹಳ್ಳಿ ಗ್ರಾಮ ಅಳಿಮಯ್ಯಂದಿರು ಎಂದು ಗ್ರಾಮ ಯೋಗೇಶ್ ತಿಳಿಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!