ಹಾಸನ : ಗಿಡ ನೆಡುವುದು ಸಂಪ್ರದಾಯವಾಗಬೇಕು ಹಾಗೆ ಈಗಿನ ಜನಾಂಗಕ್ಕೆ ಮೌಲ್ಯ ಆಧಾರಿತ ಶಿಕ್ಷಣ ಜೊತೆಗೆ ದೇಶದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸುರೇಶ್ ಮೋಹ್ಲಿ ಹೇಳಿದರು.
ಹಾಸನ ತಾಲೂಕಿನ ಗೌರಿಕೊಪ್ಪಲು ಗ್ರಾಮದ ಆದಿಚುಂಚನಗಿರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯಡಿಯಲ್ಲಿ ಪರಿಸರ ಪೂರಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಗಿಡ ನಾಟಿ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮುಖಾಂತರ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ಪರಿಸರ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಹಿಂದೆ ತಾತ ಮುತ್ತಜ್ಜರ ಕಾಲದಲ್ಲಿ ನಾವುಗಳು ಸಾಲವಾಗಿ ಪಡೆದ ಭೂಮಿಯನ್ನ ಅಷ್ಟೇ ಸಂಪತ್ಪರಿತವಾಗಿ ಹಿಂತಿರುಗಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹಾಗೆ ಪರಿಸರಕ್ಕೆ ಪೂರಕವಾಗಿ ಗಿಡ ನಾಟಿಯನ್ನು ಮಾಡುವುದು ನೀರನ್ನು ಸದ್ಬಳಕೆ ಮಾಡುವುದು ಕಲುಷಿತವಾಗುತ್ತಿರುವ ಗಾಳಿಯನ್ನು ನಿರ್ಮಲವಾಗಿ ಇಡಲು ಸಹಕರಿಸುವುದು ಪ್ಲಾಸ್ಟಿಕ್ ಅನ್ನ ತ್ಯಜಿಸುವುದು ರಾಸಾಯನಿಕ ಮುಕ್ತ ಬೇಸಾಯ ಮಾಡುವುದು ಇವೆಲ್ಲವೂ ಸಹ ಪರಿಸರ ಪೂರಕ ಕೆಲಸಗಳು ಪ್ರತಿ ವರ್ಷವೂ ಸಹ ಇಂತಹ ಪರಿಸರಕ್ಕೆ ಪೂರಕ ಕೆಲಸಗಳನ್ನು ಮಾಡುತ್ತದೆ ಎಂದರು.
ಧರ್ಮಸ್ಥಳ ಸಂಸ್ಥೆ ವತಿಯಿಂದ 43 ವರ್ಷಗಳಿಂದಲೂ ಸಹ ಶಾಲಾ-ಕಾಲೇಜುಗಳಲ್ಲಿ ರೈತ ಬಾಂಧವರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಹಾಗೆ ವಿದ್ಯಾರ್ಥಿಗಳಿಗೆ ಹಾಲಿನ ಉದಾಹರಣೆಯನ್ನು ಕೊಡುತ್ತಾ ಹಾಲನ್ನು ಒಂದು ದಿವಸ ಇಡಬಹುದು ಅದನ್ನ ಮೊಸರಾಗಿ ಪರಿವರ್ತನೆ ಮಾಡಿದರೆ ಒಂದು ವಾರ ಇಡಬಹುದು ಅದನ್ನ ತುಪ್ಪವಾಗಿ ಸಂಸ್ಕರಣೆ ಮಾಡಿದರೆ ವರ್ಷದಿಂದ ನಿರಂತರವಾಗಿ ಇಡಲು ಸಾಧ್ಯ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಪರಿಸರದ ಬಗ್ಗೆ ಈಗಿನಿಂದಲೇ ಅರಿವು ಮೂಡಿಸುವುದರಿಂದ ಮುಂದೆ ಸತ್ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ತಾಲೂಕು ಯೋಜನಾಧಿಕಾರಿ ಧನಂಜಯ, ಶಾಲೆಯ ಮುಖ್ಯೋಪಾಧ್ಯಯ ರಂಗೆಗೌಡ, ಸಹ ಶಿಕ್ಷಕಿ ಭಾಗ್ಯಲಕ್ಷ್ಮಿ,, ಕೃಷಿ ಅಧಿಕಾರಿ ಚಂದ್ರಪ್ರಭ, ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಹ ಶಿಕ್ಷಕರು ಭಾಗವಹಿಸಿದ್ದರು.










