4.2 C
Munich
Home News ಅವಿಶ್ವಾಸ ಗೊತ್ತುವಳಿ ನಿರ್ಣಯ ತಿರಸ್ಕರಿಸಿದ್ದೇನೆ: ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಗೆ ನಮ್ಮದೇ ಆಡಳಿತ: ಆರ್.ಟಿ.ದ್ಯಾವೇಗೌಡ

ಅವಿಶ್ವಾಸ ಗೊತ್ತುವಳಿ ನಿರ್ಣಯ ತಿರಸ್ಕರಿಸಿದ್ದೇನೆ: ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಗೆ ನಮ್ಮದೇ ಆಡಳಿತ: ಆರ್.ಟಿ.ದ್ಯಾವೇಗೌಡ

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ವಿರುದ್ಧ ಅವಿಶ್ವಾಸ ಮಂಡಿಸಲು ಸೊಸೈಟಿಗಳ ನೋಂದಣಿ ಕಾಯ್ದೆಯಲ್ಲಿ ಯಾವ ಅವಕಾಶವೂ ಇಲ್ಲದ ಕಾರಣ ಭಿನ್ನ ಬಣದ ನಿರ್ದೇಶಕರ ಗೊತ್ತುವಳಿ ತಿರಸ್ಕರಿಸಲಾಗಿದೆ ತಿರಸ್ಕರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ನಿರ್ದೇಶಕರು ನನಗೆ ಪತ್ರ ಬರೆದು ನೀವು ವಿಶ್ವಾಸ ಕಳೆದುಕೊಂಡಿದ್ದೀರಿ ಎಂದು ಹೇಳಿದ್ದರು. ಹದಿನೈದು ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆಯದಿದ್ದರೆ ಸಹಕಾರ ಸಂಘಗಳ ನಿಬಂಧಕರ ಮೂಲಕ ಸಭೆ ಕರೆಸುವುದಾಗಿ ಹೇಳಿದ್ದರು.

ಈ ನಡುವೆ ಸಮಿತಿಯ ಮೂವರು ನಿರ್ದೇಶಕರು ತಮ್ಮ ಸ್ಥಾನವನ್ನು ಅ್ವಹಿತಾಸಕ್ತಿ ರಕ್ಷಣೆ್ ಬಳಸಿಕೊಂಡ ಕಾರಣ ಅವರನ್ನು ಅಮಾನತು ಮಾಡಿದ್ದೆವು. ಆದರೆ ಇಂದು ಅವರನ್ನೂ ಸೇರಿಸಿ ಸಭೆ ಮಾಡಿದ್ದಾರೆ. ಅವರನ್ನು ಅಮಾನತು ಮಾಡಲು ನಮಗೆ ಅಧಿಕಾರ ಇದೆಯೋ ಇಲ್ಲವೋ ಅನ್ನುವುದು ನ್ಯಾಯಾಲಯ ತೀರ್ಮಾನಿಸಲಿ ಎಂದರು.

ಇಂದು ಅವರು ಅವಿಶ್ವಾಸ ನಿರ್ಣಯದ ಬಗ್ಗೆ ಮಾತ್ರ ಚರ್ಚೆ ಆಗಬೇಕಿತ್ತು. ನಮ್ಮ ಸಂಸ್ಥೆ ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆ್ಯಕ್ಟ್ ಅಡಿ ನೋಂದಣಿಯಾಗಿದೆ. ಸಹಕಾರ ಸಂಘದ ಕಾಯ್ದೆಯೇ ಬೇರೆ, ನಮ್ಮ ಸಂಸ್ಥೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿಲ್ಲ ಎಂದು ಅವರೇ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ ಸುಪ್ರಿಂ ಕೋರ್ಟ್ ಆದೇಶ ಇದೆ ಎಂದು ಹೇಳಿದ್ದರು.

ಮೂವರು ನಿರ್ದೇಶಕರ ಬಗ್ಗೆ ಸಾರ್ವಜನಿಕರು ನಮಗೆ ಅರ್ಜಿ ನೀಡಿದ್ದರು. ನಿರ್ದೇಶಕರು ಬಾಡಿಗೆದಾರರಾಗಿರುವಂತಿಲ್ಲ ಎಂಬ ನಿಯಮವಿದೆ. ಆದರೆ ನಿರ್ದೇಶಕರಾದ ಶ್ರೀಧರ್ ಬಾಡಿಗೆದಾರರಾಗಿದ್ದು, ಡಾ.ಅರವಿಂದ್ ತಮ್ಮ ಮಳಿಗೆಯನ್ನು ಒಳಬಾಡಿಗೆ ನೀಡಿದ್ದಾರೆ. 750 ರೂ. ಮಾಸಿಕ ಬಾಡಿಗೆ ಸಮಿತಿಗೆ ನೀಡಿ ಬಾಡಿಗೆ 22 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ. ಶ್ರೀನಿವಾಸ್ ಅವರು GRR ಹೋಟೆಲ್ ಶುರು ಆದಾಗಿನಿಂದ ಬಾಡಿಗೆ ನೀಡಿಲ್ಲ. ಹಾರನಹಳ್ಳಿ ರಾಮಸ್ವಾಮಿ ಅವರ ಕಾಲದಲ್ಲಿ ಗುತ್ತಿಗೆದಾರರಿಗೆ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ವಾಣಿಜ್ಯ ಬಳಕೆಗೆ ಅವಕಾಶ ನೀಡಲಾಗಿತ್ತು.

ನಾನು ಕಾರ್ಯದರ್ಶಿ ಆದ ನಂತರ ನಿಮ್ಮ ಗುತ್ತಿಗೆ ಅವಧಿ ಮುಗಿದಿದೆ. ಮಳಿಗೆ ಖಾಲಿ ಮಾಡಿ ಎಂದು ನಾನು ನೋಟಿಸ್ ಕೊಟ್ಟೆ. ಅದರ ವಿರುದ್ಧ ಅವರು ನ್ಯಾಯಾಲಯದ ಮೆಟ್ಟಿಲೇರಿ ಹದಿನೈದು ವರ್ಷ ಆಗಿತ್ತು. ಹಾಲಿ ಅವರು 1.42 ಕೋಟಿ ರೂ. ಬಾಡಿಗೆ ಕೊಡಬೇಕು.

ನ್ಯಾಯಾಲಯ ಮಳಿಗೆಗಳಿಗೆ ಎಂಟಿಎಸ್ ಹಕ್ಕುದಾರರು ಎಂದು ತೀರ್ಪು ಬಂದಿದೆ. ಹೀಗಾಗಿ ಅವರನ್ನು ಅಮಾನತು ಮಾಡಿ, ಸಭೆಗೆ ಬರಬಾರದು ಎಂದು ಸೂಚಿಸಿದ್ದೆ. ನಮಗೆ ಹಕ್ಕು ಇದೆಯೇ ಎಂಬುದನ್ನು ಪ್ರಾಧಿಕಾರ ಹೇಳಲಿ ಎಂದರು.

ಅಮಾನತುಗೊಂಡ ಮೂವರು ಸದಸ್ಯರನ್ನು ಹೊರತುಪಡಿಸಿ 21 ನಿರ್ದೇಶಕರು ಸಭೆಯಲ್ಲಿ ಭಾಗವಹಿದ್ದೆವು. ನಾವು ಹನ್ನೊಂದು, ಅವರು ಹತ್ತು ಜನರು ಬಂದಿದ್ದರು. ನಾವು ಹತ್ತು ಜನರೂ ಹಾಜರಾತಿ ಪುಸ್ತಕಕ್ಕೆ ಸಹಿ‌ ಮಾಡಿದ್ದೇವೆ. ಆದರೆ ಅವರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದ್ದರಿಂದ ಗೈರು ಎಂದು ತೀರ್ಮಾನಿಸಿ ನಡಾವಳಿ ಬರೆದು, ಅವರ ಅವಿಶ್ವಾಸ ತಿರಸ್ಕರಿಸಿದ್ದೇನೆ ಎಂದು ತಿಳಿಸಿದ್ದೇನೆ.

ನಾನು ಸಂಸ್ಥೆಯಲ್ಲಿ 38 ವರ್ಷದಿಂದ ಸೇವೆ ಮಾಡಿಕೊಂಡು ಬಂದಿದ್ದೇನೆ. ಅಧಿಕಾರಿಯನ್ನು ನೇಮಕ ಮಾಡಿದ್ದರು. ಈ ವಿಷಯ ನ್ಯಾಯಾಲಯದ ಮೆಟ್ಟಿಲು ಏರಲಿದೆ. ನಮ್ಮ ಅಧ್ಯಕ್ಷ ಸ್ಥಾನದ ಚುನಾವಣೆಯನ್ನೇ ಅವರು ಪ್ರಶ್ನಿಸಿದ್ದಾರೆ. ನಾವೇ ಆಯ್ಕೆ ಆಗಿಲ್ಲ ಅಂದ ಮೇಲೆ ನಮ್ಮ ಮೇಲೆ ಅವಿಶ್ವಾಸ ಮಂಡನೆ ಹೇಗೆ ಸಾಧ್ಯ? ನ್ಯಾಯಾಲಯದಲ್ಲಿ ವಿಷಯ ತೀರ್ಮಾನ ಆದ ನಂತರ ಅಗತ್ಯ ಬಿದ್ದರೆ ಚುನಾವಣೆಗೆ ಹೋಗಲು ಸಿದ್ಧವಿದ್ದೇವೆ ಎಂದರು.

ನನಗೆ ಸದಸ್ಯರು ನಿರ್ದೇಶನ ನೀಡಿದ್ದರಿಂದ ನಾನೇ ಸಭೆ ಕರೆದಿದ್ದೇನೆ. ಬೇರೆಯವರು ಕರೆದ ಸಭೆಯನ್ನು ನಾನು ನಡೆಸಲು ಬರುವುದಿಲ್ಲ. ವೀಕ್ಷಕರು ರಿಜಿಸ್ಟ್ರಾರ್ ಗೆ ವರದಿ ಸಲ್ಲಿಸಲಿದ್ದಾರೆ. ಅವರು ಏನು ತೀರ್ಮಾನ ಮಾಡಲಿದ್ದಾರೆ ಎಂದರು.

error: Content is protected !!