1.4 C
Munich
Home ಮನರಂಜನೆ ‘ಮಹಾನ್’ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ

‘ಮಹಾನ್’ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ

'ಮಹಾನ್' ಚಿತ್ರದಲ್ಲಿ 'ಬಿಗ್ ಬಾಸ್' ಖ್ಯಾತಿಯ ನಮ್ರತಾ ಗೌಡ

“ನಾಗಿಣಿ” ಧಾರಾವಾಹಿಯ ಮೂಲಕ ನಾಡಿನ ಜನರ ಮನ ಗೆದ್ದ “ಬಿಗ್ ಬಾಸ್” ಖ್ಯಾತಿಯ ನಟಿ ನಮ್ರತಾ ಗೌಡ ಹೆಸರಾಂತ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡುವ ನಮ್ರತಾ ಗೌಡ, ”ನಾನು ಸಿನಿಮಾದಲ್ಲಿ ನಟಿಸುವಂತೆ ಅನೇಕ ಸ್ನೇಹಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ನಾನು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ‘ಮಹಾನ್’ ಚಿತ್ರದ ಕಥೆ ಹೇಳಿದಾಗ,‌ ಕಥೆ ಮನಸ್ಸಿಗೆ ಹತ್ತಿರವಾಯಿತು. ಕಥೆ ಕೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ರೈತರ ಬದುಕು ಬವಣೆಗಳ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಲು ಬಹಳ ಸಂತೋಷವಾಗಿದೆ’ ಎನ್ನುತ್ತಾರೆ. ವಿಜಯ ರಾಘವೇಂದ್ರ, ರಾಧಿಕಾ ಚೇತನ್, ಮಿತ್ರ ಮುಂತಾದ ಜನಪ್ರಿಯ ಹಾಗೂ ಅನುಭವಿ ಕಲಾವಿದರ ಬಳಗ ಚಿತ್ರದಲ್ಲಿದೆ.

error: Content is protected !!