15.2 C
Munich
Home News ಚನ್ನರಾಯಪಟ್ಟಣ: ಶ್ರೀ ಕಲ್ಯಾಣಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಚನ್ನರಾಯಪಟ್ಟಣ: ಶ್ರೀ ಕಲ್ಯಾಣಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಚನ್ನರಾಯಪಟ್ಟಣ: ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಡೆ ಶ್ರಾವಣ ಶನಿವಾರ ಹಾಗೂ ಅಮಾವಾಸ್ಯೆ ಪ್ರಯುಕ್ತ ಶನಿವಾರ ವಿಶೇಷ ಪೂಜೆ, ಉತ್ಸವ ಮತ್ತು ಅನ್ನಸಂತರ್ಪಣೆ ನೆರವೇರಿತು.

ಕಡೇ ಶ್ರಾವಣ ಶನಿವಾರ ಹಾಗೂ ಅಮಾವಾಸ್ಯೆಯ ಪ್ರಯುಕ್ತ ಶ್ರೀ ಕಲ್ಯಾಣಿ ಆಂಜನೇಯಸ್ವಾಮಿ ದೇಗುಲದಲ್ಲಿ ಗ್ರಾಮದ ಚಿನ್ನ-ಬೆಳ್ಳಿ ವರ್ತಕ ಗುಮಾಜಿ ಸೇಟ್ ಕುಟುಂಬಸ್ಥರು ವಿಶೇಷ ಪೂಜೆಯನ್ನು ಏರ್ಪಡಿಸಿದ್ದರು.
ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ಸಂಜೆ ಗ್ರಾಮದ ರಾಜಬೀದಿಗಳಲ್ಲಿ ಶ್ರೀ ಕಲ್ಯಾಣಿ ಆಂಜನೇಯಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು. ರಾತ್ರಿ ವಿಶೇಷ ಪೂಜೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇಗುಲದ ಮುಖ್ಯ ಅರ್ಚಕರಾದ ರವಿಶಾ ಚಾರ್, ಮಂಜುಚಾರ್, ಗ್ರಾಮಸ್ಥರಾದ ಹೋಟೆಲ್ ರಾಜಣ್ಣ, ಎನ್.ಜಿ.ಶಂಕರೇಗೌಡ, ಸೇರಿದಂತೆ ಗುಮಾಜಿ ಕುಟುಂಬಸ್ಥರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

error: Content is protected !!