ಸಕಲೇಶಪುರ: ಮಳೆಯ ಅಬ್ಬರ – ಶಾಲೆಯ ಗೋಡೆ, ಹೆಂಚು ಕುಸಿತ – ಅನಾಹುತ ತಪ್ಪಿದ ಘಟನೆ

ಸಕಲೇಶಪುರ : ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಮುಂದುವರಿದಿರುವ ಭಾರಿ ಮಳೆ ಅಬ್ಬರದಿಂದ ಸರಕಾರಿ ಶಾಲೆ ಕಟ್ಟಡದ ಗೋಡೆ ಕುಸಿದು ಬಿದ್ದಿರುವ ಘಟನೆ ನಡೆದಿದೆ.

ತಾಲ್ಲೂಕಿನ ಕಡಗರವಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ಗೋಡೆ ಹಾಗೂ ಹೆಂಚುಗಳು ಇಂದು ಬೆಳಿಗ್ಗೆ ಧಾರಾಕಾರ ಮಳೆ ಹಾಗೂ ಬಿರುಸಿನ ಗಾಳಿಗೆ ಕುಸಿದು ಬಿದ್ದಿದೆ.

ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಉಪ ಆಯುಕ್ತರು ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಬಾರದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಪ್ರತಿನಿತ್ಯ ಹಾಜರಾಗುವ ವಿದ್ಯಾರ್ಥಿಗಳು ಹಾಜರಿರದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.