0.9 C
Munich
Home News ಸಂಘಟನೆಯ ಮೂಲಕ ಹೋರಾಡಿದರೆ ಹಕ್ಕು ಪಡೆಯಲು ಸಾಧ್ಯ: ಸಿ.ಡಿ.ಮನುಕುಮಾರ್

ಸಂಘಟನೆಯ ಮೂಲಕ ಹೋರಾಡಿದರೆ ಹಕ್ಕು ಪಡೆಯಲು ಸಾಧ್ಯ: ಸಿ.ಡಿ.ಮನುಕುಮಾರ್

ಆಲೂರು: ಸಂಘಟನೆಯಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹಾಸನ ಜಿಲ್ಲಾ ಕರವೇ ಅಧ್ಯಕ್ಷ ಸಿ.ಡಿ.ಮನುಕುಮಾರ್ ಹೇಳಿದರು.

ಆಲೂರು ಲಯನ್ಸ್ ಕ್ಲಬ್ ಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡವೇ ಜಾತಿ, ಧರ್ಮ ಅನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಬಂದಿದೆ. ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ಜಲ, ನೆಲ ವಿಷಯದಲ್ಲಿ ಹಲವು ಹೋರಾಟ ಮಾಡುತ್ತಾ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಸುತ್ತಿದೆ. ಶೇ.೬೦ ರಷ್ಟು ಅನ್ಯ ಭಾಷಿಗರಿರುವ ಬೆಂಗಳೂರು ಮಹಾನಗರದಲ್ಲಿ ನಮ್ಮ ಹೋರಾಟದ ಫಲವಾಗಿ ಶೇ. ೬೦ ರಷ್ಟು ನಾಮಪಲಕಗಳು ಕನ್ನಡದಲ್ಲಿರಬೇಕು ಎಂದು ಸುಗ್ರೀವಾಜ್ಞೆ ಆದೇಶ ನೀಡಿದೆ.

ರಾಜ್ಯದ ದೊಡ್ಡ ದೊಡ್ಡ ಉದ್ಯಮಿಗಳಲ್ಲಿ ಇಂದು ಕೂಡ ಅತ್ಯುನ್ನತ ಹುದ್ದೆಯಲ್ಲಿ ಅನ್ಯ ಭಾಷಿಗರೆ ಕಾರ್ಯನಿರ್ವಹಿಸುತ್ತಿದ್ದಾರೆ. ಯುವಕರು ಕೆಲಸ ಪಡೆದುಕೊಳ್ಳಬೇಕಾದರೆ ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ಇನ್ನಷ್ಟು ಸಂಘಟನೆ ಗಟ್ಟಿಗೊಳಿಸುವ ಸಲುವಾಗಿ ಯುವ ಕಾರ್ಯಕರ್ತರನ್ನು ಸೇರಿಸಿಕೊಳ್ಳುತ್ತಿದೆ ಎಂದರು.

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ, ತಾಲ್ಲೂಕು ಅಧ್ಯಕ್ಷ ನಟರಾಜ್ ಮಾತನಾಡಿ, ಕಾರ್ಯಕರ್ತರು ನಾರಾಯಣಗೌಡರು ಹಾಗೂ ಮನುಕುಮಾರ್ ಅವರ ನೇತೃತ್ವದಲ್ಲಿ ರಕ್ಷಣಾ ವೇದಿಕೆ ಸೇರುವ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಬಿ ಮಂಜೇಗೌಡ, ಕಾರ್ಯದರ್ಶಿ ಶಶಿ ಉಪಸ್ಥಿತರಿದ್ದರು.

error: Content is protected !!