ಕಾನ್ಪುರ : ವಿವಾಹಿತ ಮಹಿಳೆಯ ಮನಸ್ಸನ್ನು ವಶಪಡಿಸಿಕೊಳ್ಳಲು ‘ವಶೀಕರಣ’ ತಂತ್ರ ಮಾಡಿಸಲು ಯತ್ನಿಸಿದ 26 ವರ್ಷದ ರಾಜಬಾಬು ಎಂಬಾತ ತಾಂತ್ರಿಕನಿಂದಲೇ ಕೊಲೆಯಾದ ಘಟನೆ ಕಾನ್ಪುರ ದೇಹಾತ್ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಸ್ವ-ಘೋಷಿತ ಮಾಟಗಾರ ನೀಲು (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಆತಂಕ ಮೂಡಿಸಿದೆ.
ಅರ್ಷದ್‌ಪುರ ಗ್ರಾಮದ ರಾಜಬಾಬು, ಗುಡಿಯಾ ಎಂಬ ವಿವಾಹಿತೆಯೊಂದಿಗೆ ಪ್ರೀತಿಯಲ್ಲಿದ್ದನು. ಆದರೆ 2025ರ ಏಪ್ರಿಲ್‌ನಲ್ಲಿ ಗುಡಿಯಾ ದೀಪ್ ಸಿಂಗ್ ಅವರೊಂದಿಗೆ ವಿವಾಹವಾಗಿದ್ದರಿಂದ ರಾಜಬಾಬು ಮನೋವ್ಯಥೆಯಿಂದ ಬಳಲುತ್ತಿದ್ದನು.
ಇದರ ನಡುವೆ, ‘ವಶೀಕರಣ’ ಮೂಲಕ ಮಹಿಳೆಯನ್ನು ಮರಳಿ ತನ್ನತ್ತ ಸೆಳೆಯಬಹುದು ಎಂದು ಹೇಳಿ ನೀಲು, ರಾಜಬಾಬುವಿಗೆ ನಂಬಿಕೆ ಮೂಡಿಸಿದ್ದನು. ಈಗಾಗಲೇ ರಾಜಬಾಬು ಆರೋಪಿಗೆ ₹36,000 ನೀಡಿದ್ದನು.
ನವೆಂಬರ್‌ನಲ್ಲಿ ಗುಡಿಯಾ ಪತಿಯೊಂದಿಗಿನ ಅಸಮಾಧಾನದಿಂದ ತಾಯಿ ಮನೆಗೆ ಬಂದಿದ್ದನ್ನು ರಾಜಬಾಬು ‘ವಶೀಕರಣ’ ತಂತ್ರದ ಫಲವೆಂದು ತಪ್ಪಾಗಿ ನಂಬಿದ್ದನು.
ಹಣದ ವಿವಾದ – ‘ಮಾಟ ಮಾಡುವ’ ವೇಳೆ ಹತ್ಯೆ
ನವೆಂಬರ್ 24ರಂದು ನೀಲು ರಾಜಬಾಬುವನ್ನು ತನ್ನ ಗ್ರಾಮಕ್ಕೆ ಕರೆದುಕೊಂಡು ಹೋಗಿ, ಇಬ್ಬರೂ ಮದ್ಯಪಾನ ಮಾಡಿದ್ದಾರೆ. ಬಳಿಕ ಹತ್ತಿರದ ಜಮೀನಿನಲ್ಲಿ ‘ವಶೀಕರಣ ಕ್ರಿಯೆ’ ಆರಂಭಿಸಿದಾಗ, ಈ ಕ್ರಿಯೆಗೆ ಒಪ್ಪಿಕೊಂಡಿದ್ದ ₹2 ಲಕ್ಷದ ಪಾವತಿ ಕುರಿತು ಇಬ್ಬರ ನಡುವೆ ವಾಗ್ವಾದ ಉಂಟಾಯಿತು.
ಕೋಪದೊಂದಿಗೆ ನೀಲು ಚಾಕುವಿನಿಂಸ ರಾಜಬಾಬುವನ್ನು ಹಲವಾರು ಬಾರಿ ಚುಚ್ಚಿ ಹತ್ಯೆ ಮಾಡಿದಾನೆ.
ಮರುದಿನ ಬೆಳಿಗ್ಗೆ ಸ್ಥಳೀಯರು ಜಮೀನಿನಲ್ಲಿ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಶವದ ಹತ್ತಿರ ಮದ್ಯದ ಪ್ಯಾಕೆಟ್ ಸಿಕ್ಕಿದ್ದು, ತನಿಖೆಗೆ ಸುಳಿವು ಸಿಕ್ಕಂತಾಯಿತು.
ಸಿಸಿಟಿವಿ ದೃಶ್ಯ – ಆರೋಪಿಗೆ ಬಲೆ:
ಪೊಲೀಸ್ ಸೂಪರಿಂಟೆಂಡೆಂಟ್ ಶ್ರದ್ಧಾ ನರೇಂದ್ರ ಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ, “ಮೊದಲು ಇದು ಆತ್ಮಹತ್ಯೆಯಂತೆ ಕಂಡಿತ್ತು. ಆದರೆ ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳೀಯರ ಮಾಹಿತಿ ಆಧಾರದಲ್ಲಿ ನೀಲುವಿನ ಮೇಲೆ ಅನುಮಾನ ಬೆಳೆದು, ಹರ್ದಿಯಾನಾಲಾ ಬಳಿ ಅವನನ್ನು ಬಂಧಿಸಲಾಗಿದೆ.”
ರಾಜಬಾಬುವಿನ ತಾಯಿ ಶವವನ್ನು ನೋಡಿದಾಗ ಪ್ರಜ್ಞೆ ಕಳೆದುಕೊಂಡರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಘಟನೆ ಬಳಿಕ ಕಪಟ ತಾಂತ್ರಿಕರ ಪ್ರಭಾವಕ್ಕೆ ಬಲಿಯಾಗುತ್ತಿರುವವರ ಬಗ್ಗೆ ಮತ್ತೆ ಗಂಭೀರ ಚರ್ಚೆ ಆರಂಭವಾಗಿದೆ.
26-year-old man named Rajababu was murdered by the practitioner himself after he tried to perform a 'bewitchment' technique to win the heart of a married woman in Kanpur's Dehat district.










