ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗ್ಗಡೆ 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
📍 ಹುಬ್ಬಳ್ಳಿ,ಮಾರ್ಚ್,30,2026(www.kannadapost.com): ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ 6 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಲೋಕಾಯುಕ್ತ ಬಲೆಗೆ ಬಿದ್ದವರು ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗ್ಗಡೆ ಎಂದು ಗುರುತಿಸಲಾಗಿದೆ.
🚨 ಲಂಚ ಬೇಡಿಕೆ ಆರೋಪ
ಮೂಲಗಳ ಪ್ರಕಾರ, ಲಾರಿ ಪೆಟ್ರೋಲ್ ಬಂಕ್ ಮಾಲೀಕನಿಗೆ 60 ಲಕ್ಷ ರೂ. ಜಿಎಸ್‌ಟಿ ಪಾವತಿಸಬೇಕೆಂದು ನೋಟಿಸ್ ನೀಡಲಾಗಿತ್ತು.
ಆದರೆ, ಆ ಮೊತ್ತ ಕಡಿಮೆ ಮಾಡಲು ಹಾಗೂ ಪ್ರಕರಣವನ್ನು ಸಡಿಲಿಸಲು 10 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
⚖️ ಲೋಕಾಯುಕ್ತ ಟ್ರ್ಯಾಪ್
ಈ ಸಂಬಂಧ ವಿಶ್ವನಾಥ್ ನಾಯಕ್ ಬೆಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಟ್ರ್ಯಾಪ್ ಮಾಡಿ, ಮುಂಗಡವಾಗಿ 6 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಭರತ್ ಹೆಗ್ಗಡೆಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
📍 Hubballi, March 30, 2026:
A Commercial Tax Deputy Commissioner was caught red-handed by Lokayukta officials while accepting a bribe of ₹6 lakh in Hubballi.
The accused officer has been identified as Bharat Hegde.
🚨 Bribe Demand Allegation
According to sources, the officer had issued a notice demanding ₹60 lakh GST payment from a lorry petrol bunk owner.
It is alleged that he demanded ₹10 lakh as a bribe to reduce or waive the amount.
⚖️ Lokayukta Trap
Following a complaint by Vishwanath Nayak, Bengaluru Lokayukta officials conducted a trap operation.
The officer was caught red-handed while accepting ₹6 lakh as advance bribe.










