20.7 C
Munich
Home News Sakleshpur:ಸಕಲೇಶಪುರ:ಕ್ರಾಫರ್ಡ್ ಆಸ್ಪತ್ರೆಗೆ ಆಧುನಿಕ ಲ್ಯಾಬ್ ಕಟ್ಟಡ: ಆರೋಗ್ಯ ಸೇವೆ ವಿಸ್ತರಣೆಗೆ ಶಾಸಕ ಸಿಮೆಂಟ್ ಮಂಜು ಚಾಲನೆ.

Sakleshpur:ಸಕಲೇಶಪುರ:ಕ್ರಾಫರ್ಡ್ ಆಸ್ಪತ್ರೆಗೆ ಆಧುನಿಕ ಲ್ಯಾಬ್ ಕಟ್ಟಡ: ಆರೋಗ್ಯ ಸೇವೆ ವಿಸ್ತರಣೆಗೆ ಶಾಸಕ ಸಿಮೆಂಟ್ ಮಂಜು ಚಾಲನೆ.

ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನೂತನ ಲ್ಯಾಬ್ ಕಟ್ಟಡಕ್ಕೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ
ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ ನೂತನ ಲ್ಯಾಬ್ ಕಟ್ಟಡ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ

ಸಕಲೇಶಪುರ, ಏಪ್ರಿಲ್,17,2026(www.kannadapost.com): ಜನಸಾಮಾನ್ಯರಿಗೆ ಸುಲಭ, ವೇಗವಾದ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ನೂತನ ಲ್ಯಾಬ್ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಈ ಕುರಿತು ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಇದುವರೆಗೆ ಹಲವಾರು ಪ್ರಮುಖ ವೈದ್ಯಕೀಯ ಪರೀಕ್ಷೆಗಳಿಗಾಗಿ ರೋಗಿಗಳು ಹಾಸನಕ್ಕೆ ತೆರಳಬೇಕಾಗುತ್ತಿತ್ತು. ಲ್ಯಾಬ್ ವರದಿಗಳನ್ನು ಪಡೆಯಲು ಮೂರುರಿಂದ ನಾಲ್ಕು ದಿನಗಳ ಕಾಲ ಕಾಯಬೇಕಾಗುತ್ತಿದ್ದ ಸಮಸ್ಯೆ ಎದುರಾಗುತ್ತಿತ್ತು ಎಂದು ತಿಳಿಸಿದರು.

ಇನ್ನು ಮುಂದೆ ಆಸ್ಪತ್ರೆಯಲ್ಲೇ ಆಧುನಿಕ ಲ್ಯಾಬ್ ಸೌಲಭ್ಯಗಳು ಲಭ್ಯವಾಗುವುದರಿಂದ ತಕ್ಷಣ ಪರೀಕ್ಷೆ ಹಾಗೂ ವರದಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಚಿಕಿತ್ಸೆ ಪ್ರಕ್ರಿಯೆ ವೇಗವಾಗಿ ನಡೆಯಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ಅನುಕೂಲವಾಗಲಿದೆ ಎಂದರು.

ಹೊಸ ಲ್ಯಾಬ್‌ನಲ್ಲಿ ರಕ್ತಪರೀಕ್ಷೆ, ಮೂತ್ರಪರೀಕ್ಷೆ ಸೇರಿದಂತೆ ವಿವಿಧ ಅಗತ್ಯ ತಪಾಸಣೆಗಳನ್ನು ಸ್ಥಳೀಯ ಮಟ್ಟದಲ್ಲೇ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ರೋಗಿಗಳ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ ಎಂದು ಹೇಳಿದರು.

ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕ್ರಾಫರ್ಡ್ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ರೂಪಿಸುವ ದಿಟ್ಟ ಸಂಕಲ್ಪ ಹೊಂದಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ್, ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್, ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!