ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಹಾಗೂ ಹಣ ಬೇಡಿಕೆಯ ಆರೋಪಗಳನ್ನು ತಳ್ಳಿ ಹಾಕಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು/ದಕ್ಷಿಣ ಕನ್ನಡ,ಮಾರ್ಚ್,17,2026 (www.kannadapost.com): ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಹಾಗೂ ಹಣ ಬೇಡಿಕೆಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. “ನನ್ನ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳು ಸುಳ್ಳು. ಈಗಾಗಲೇ ಮೇಲಧಿಕಾರಿಗಳು ತನಿಖೆ ನಡೆಸಿದ್ದು, ಯಾವುದೇ ತಪ್ಪು ಪತ್ತೆಯಾಗಿಲ್ಲ,” ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧದ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕುಟುಂಬ ಕಲಹದಿಂದ ಆರಂಭವಾದ ಪ್ರಕರಣ
ಸಂದೇಶ್ ಅವರ ಪ್ರಕಾರ, 2025ರ ಮೇ ತಿಂಗಳಲ್ಲಿ ಅವರು ಠಾಣೆಗೆ ವರ್ಗಾವಣೆಯಾಗಿದ್ದಾಗ ಒಂದು ಕುಟುಂಬ ಕಲಹ ಪ್ರಕರಣ ಎದುರಾಯಿತು.
“ಹೆಡ್ ಕಾನ್ಸ್ಟೇಬಲ್ ರವೀಂದ್ರ ಅವರು ಗಂಡ-ಹೆಂಡತಿ ನಡುವೆ ಗಲಾಟೆ ನಡೆಯುತ್ತಿದೆ ಎಂದು ತಿಳಿಸಿದರು. ಆ ವೇಳೆ ಮಹಿಳೆ ಠಾಣೆಗೆ ಬಂದು ಗದ್ದಲ ಮಾಡುತ್ತಿದ್ದಳು. ಆಕೆಯ ಅಕ್ಕ ಕೂಡ ಬಂದು ಆಕೆ ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿದ್ದಾಳೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಆಕೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದೇನೆ,” ಎಂದು ವಿವರಿಸಿದರು.
ಕಿಡ್ನಿ ಟ್ರಾನ್ಸ್ಪ್ಲಾಂಟ್ ಪ್ರಕರಣದ ಆರೋಪ
ಇತ್ತೀಚೆಗೆ ದೂರು ನೀಡಿದ ಮಹಿಳೆಯ ಗಂಡನ ವಿರುದ್ಧ ಕಿಡ್ನಿ ಟ್ರಾನ್ಸ್ಪ್ಲಾಂಟ್ ಪ್ರಕರಣ ದಾಖಲಾಗಿತ್ತು.
“ತಾಕೋಡೆ ಚರ್ಚ್ನಲ್ಲಿ ಹಣ ವರ್ಗಾವಣೆ ನಡೆದಿದ್ದು, ಮಹಿಳೆಯ ಖಾತೆ ಬಳಸಲಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆ ಆಕೆಯ ಗಂಡನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯ ಸಿಸಿಟಿವಿ ದೃಶ್ಯಗಳೂ ನಮ್ಮ ಬಳಿ ಇವೆ,” ಎಂದು ಹೇಳಿದರು.
ಲೈಂಗಿಕ ಕಿರುಕುಳ ಆರೋಪಕ್ಕೆ ತಿರುಗೇಟು
“ನಾನು ಯಾರಿಂದಲೂ ಹಣ ಕೇಳಿಲ್ಲ. ಯಾವುದೇ ರೀತಿಯ ಲೈಂಗಿಕ ಕಿರುಕುಳ ನೀಡಿಲ್ಲ. ಈ ಆರೋಪಗಳು ಸತ್ಯಕ್ಕೆ ದೂರವಾಗಿವೆ,” ಎಂದು ಸಂದೇಶ್ ಸ್ಪಷ್ಟಪಡಿಸಿದರು.
ಕಾಂಪೌಂಡ್ ಹಾರಿದ ಘಟನೆ
ಮಹಿಳೆಯ ಮನೆಯ ಕಾಂಪೌಂಡ್ ಹಾರಿದ ಆರೋಪವನ್ನು ಅವರು ಒಪ್ಪಿಕೊಂಡಿದ್ದಾರೆ.
“ಆ ಮನೆ ನನ್ನ ಸಂಬಂಧಿಕರದು. ಗಂಡ-ಹೆಂಡತಿ ಜಗಳದಿಂದ ಆತಂಕ ವ್ಯಕ್ತವಾದ ಕಾರಣ ನಾನು ಒಳಗೆ ಹೋಗಿ ಪರಿಶೀಲಿಸಿದ್ದೇನೆ. ಅದು ಸುರಕ್ಷತಾ ದೃಷ್ಟಿಯಿಂದ ಮಾತ್ರ,” ಎಂದು ಹೇಳಿದರು.
ಡ್ಯಾನ್ಸ್ ವಿಚಾರ
ಮಹಿಳೆಯೊಂದಿಗೆ ಡ್ಯಾನ್ಸ್ ಮಾಡಿದ ಬಗ್ಗೆ ಮಾತನಾಡಿದ ಅವರು, “ಕ್ರಿಶ್ಚಿಯನ್ ಸಮುದಾಯದಲ್ಲಿ ಇಂತಹ ಡ್ಯಾನ್ಸ್ ಸಾಮಾನ್ಯ. ಅದರಲ್ಲಿ ಯಾವುದೇ ದುರುದ್ದೇಶ ಇಲ್ಲ,” ಎಂದು ಹೇಳಿದರು.
ಪ್ರತಿಆರೋಪ
“ಕಳೆದ ಒಂದು ವರ್ಷದಿಂದ ನನ್ನ ವಿರುದ್ಧ ಪದೇಪದೇ ದೂರುಗಳು ಬರುತ್ತಿವೆ. ಆದರೆ ಈಗಾಗಲೇ ನಡೆದ ತನಿಖೆಯಲ್ಲಿ ನನಗೆ ಕ್ಲೀನ್ ಚಿಟ್ ದೊರೆತಿದೆ. ಇತ್ತೀಚಿನ ಪ್ರಕರಣದಲ್ಲೂ ಸತ್ಯ ಹೊರಬರುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
Inspector Sandesh Denies Allegations, Calls Them False
Bengaluru/Dakshina Kannada, March 17: Moodbidri Police Inspector Sandesh has strongly denied allegations of sexual harassment and monetary demand leveled against him, calling them completely false.
Speaking to a private media outlet, he said, “All allegations against me are baseless. A departmental inquiry has already been conducted, and no wrongdoing was found. The complaint has been dismissed.”
Background of the Case
According to Sandesh, the issue began with a family dispute when he took charge in May 2025.
“A woman created a scene at the station, and her sister alleged she was involved in immoral activities. We warned her and sent her away,” he explained.
Kidney Transplant Case Angle
He also clarified that the complainant’s husband is involved in a kidney transplant-related case.
“There were financial transactions through her account linked to the case. We questioned him in the presence of relatives and lawyers. CCTV footage is available,” he added.
Denial of Misconduct
“I have neither demanded money nor engaged in any misconduct. These allegations are far from the truth,” Sandesh asserted.
Compound Incident
He admitted to entering a house by jumping the compound wall but clarified the reason.
“It was my relative’s house. Due to a domestic dispute, I checked on them for safety reasons,” he said.
Dance Controversy
Regarding the dance allegation, he said, “It is normal in Christian culture. There was no ill intent.”
Counter Allegations
He claimed that repeated complaints have been filed against him over the past year, but he has already been given a clean chit.
“I am confident the truth will come out again,” he added.










