ತರೀಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ಶೆಟ್ಟಿ ಬಣ) ಜಿಲ್ಲಾ ಘಟಕ ಅಧ್ಯಕ್ಷ ನಾಗವಾರ ರಮೇಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮುಖಂಡರುಗಳು ಅಧಿಕೃತವಾಗಿ ಕರವೇ ಬಣಕ್ಕೆ ಗುರುವಾರ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ, ತಾಲ್ಲೂಕು ಉಪಾಧ್ಯಕ್ಷ ಬಾಲು, ಕಾರ್ಯದರ್ಶಿ ರವಿನಾಯ್ಕ್, ಯುವಘಟಕದ ಇಮ್ರಾನ್, ಭರತ್, ಮುಖಂಡರುಗಳಾದ ಪರಮೇಶ್, ಬಸವರಾಜ್, ಯೋಗೀಶ್, ಸುನೀಲ್, ವೆಂಕಟೇಶ್, ಹರೀಶ್ ಮತ್ತಿತರರು ಹಾಜರಿದ್ದರು.










